ಬೆಳ್ಳಾರೆ: ಎರಡಂತಸ್ತಿನ ಕಟ್ಟಡದಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಗುತ್ತಿಗೆದಾರ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.08. ಎರಡಂತಸ್ತಿನ ಮನೆಯಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗುತ್ತಿಗೆ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಗುರುವಾರದಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಮೂಲತಃ ಹಾಸನದ ಪ್ರಸ್ತುತ ಪಳ್ಳಿಮಜಲು ಎಂಬಲ್ಲಿ ವಾಸವಿದ್ದ ಮೇಸ್ತ್ರಿ ಕೆಲಸದ ಗುತ್ತಿಗೆ ನಿರ್ವಹಿಸುತ್ತಿದ್ದ ಅಲಿ ಎಂದು ಗುರುತಿಸಲಾಗಿದೆ. ಬೆಳ್ಳಾರೆಯ ತಡಗಜೆ ಎಂಬಲ್ಲಿ ಎರಡಂತಸ್ತಿನ ಮನೆ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದು, ಕೆಲಸ ಪೂರ್ತಿಯಾದ ಹಿನ್ನೆಲೆಯಲ್ಲಿ ಗುರುವಾರದಂದು ಅಳತೆಗಾಗಿ ಎರಡನೇ ಮಹಡಿಯ ಮೇಲೆ ತೆರಳಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದರ. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕುತ್ತಿಗೆಯ ಭಾಗ ಬಲವಾದ ಏಟು ಬಿದ್ದ ಕಾರಣ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

Also Read  ಮಾಣಿಯಲ್ಲಿ ರಸ್ತೆಗೆ ಉರುಳಿದ ಲಾರಿ ➤ ಚಾಲಕ ಪ್ರಾಣಾಪಾಯದಿಂದ ಪಾರು

error: Content is protected !!
Scroll to Top