ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com. ಜು.30. ಕಡಬ. ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೋಡಿಂಬಾಳ ಗ್ರಾಮದ ನೆಕ್ಕರೆಕೊಚ್ಚಿ ನಿವಾಸಿ ಬಾಬು ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿಯ ಪ್ರಕಾರ ಕೆಲಸಕ್ಕೆ ಹೋಗಿ ಹಿಂದಿರುಗುವಾಗ ಘಟನೆ ನಡೆದಿರಬಹುದು ಎಂಬುದಾಗಿ ಶಂಕಿಸಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top