ವಿಟ್ಲ: ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಆ.08. ಗ್ರೈಂಡರ್ ನಲ್ಲಿ ತೆಂಗಿನಕಾಯಿ ರುಬ್ಬುತ್ತಿದ್ದ ವೇಳೆ ಶಾಲು ಸಿಕ್ಕಿ ಹಾಕಿಕೊಂಡು ಮಹಿಳೆಯೋರ್ವರು ಮೃತಪಟ್ಟ ಘಟನೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ವಿಟ್ಲದ ಕಂಬಳಬೆಟ್ಟು ಕೊಳಂಬೆ ನಿವಾಸಿ ಅಬ್ಬಾಸ್ ಎಂಬವರ ಪತ್ನಿ ಹಲೀಮಮ್ಮ(45) ಮೃತಪಟ್ಟ ದುರ್ದೈವಿ. ಮಂಗಳವಾರದಂದು ಗ್ರೈಂಡರ್ ನಲ್ಲಿ ತೆಂಗಿನಕಾಯಿ ರುಬ್ಬುತ್ತಿದ್ದ ವೇಳೆ ಶಾಲು ಸಿಲುಕಿದ್ದರಿಂದ ತೀವ್ರ ಗಾಯಗೊಂಡ ಹಲೀಮಮ್ಮರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Scroll to Top