ಇಚಿಲಂಪಾಡಿ: ಬಾವಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಆ.07. ತಾಲೂಕು ವ್ಯಾಪ್ತಿಯ ಇಚಿಲಂಪಾಡಿ ಪಾತಡ್ಕ ಎಂಬಲ್ಲಿ ಮಹಿಳೆಯೋರ್ವರು ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಇಚಿಲಂಪಾಡಿ ಗ್ರಾಮದ ಪಾತಡ್ಕ ನಿವಾಸಿ ಮಹಾಬಲ ಪೂಜಾರಿ ಎಂಬವರ ಪತ್ನಿ ಹೇಮಲತಾ ಎಂದು ಗುರುತಿಸಲಾಗಿದೆ. ಇವರು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದರೆಂದು ತಿಳಿದುಬಂದಿದೆ.

Scroll to Top