ಇನ್ಮುಂದೆ ಪೆಟ್ರೋಲ್ – ಡೀಸೆಲ್ ಇಲ್ಲದೆ ನೀರಿನಿಂದ ವಾಹನ ಚಲಾಯಿಸಬಹುದು..!! ➤ ನೂತನ ಸಂಶೋಧನೆ ಕಂಡುಹಿಡಿದ ತಮಿಳುನಾಡಿನ ಇಂಜಿನಿಯರ್‌

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.12. ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್‍ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಜನತೆಗೆ ಮೆಕ್ಯಾನಿಕಲ್‍ ಇಂಜಿನಿಯರ್‌ ಓರ್ವರು ಸಿಹಿಸುದ್ದಿ ನೀಡಿದ್ದು, ನೀರನ್ನು ಇಂಧನವಾಗಿ ಬಳಸಿ ನೀರಿನಿಂದಲೇ ವಾಹನವನ್ನು ಚಲಾಯಿಸುವ ಸಂಶೋಧನೆಯನ್ನು ಮಾಡಿದ್ದಾರೆ.

ಕಳೆದ ಸುಮಾರು 10 ವರ್ಷಗಳ ಕಾಲ ಸಂಶೋಧನೆ ನಡೆಸಿ ಯಶಸ್ವಿಯಾದ ತಮಿಳುನಾಡಿನ ಮೆಕ್ಯಾನಿಕಲ್‍ ಇಂಜಿನಿಯರ್‌ ಸೌಂದರ್ಯ ರಾಜನ್‍ ಗೆ ಜಪಾನ್ ದೇಶವು ಪ್ರೋತ್ಸಾಹ ನೀಡಿದ್ದು, ವಾಹನದಲ್ಲಿ ಅಳವಡಿಸಿರುವ ಡಿಸ್ಟಿಲ್ಡ್ ವಾಟರ್ ನ್ನು ಪೆಟ್ರೋಲ್‍ ಮತ್ತು ಡೀಸೆಲ್‍ ಗೆ ಬದಲಾಗಿ ವಾಹನದ ಎಂಜಿನ್‍ ಗೆ ಬಳಸಬಹುದು ಎಂದು ಅವರು ಪ್ರಾತ್ಯಕ್ಷಿಕೆಯಲ್ಲಿ ತೋರಿಸಿದ್ದಾರೆ. ಹೈಡ್ರೋಜನ್‍ ಅನ್ನು ಇಂಧನವಾಗಿ ಬಳಸಿದ್ರೆ, ಅದು ಆಮ್ಲಜನಕವಾಗಿ ಪರಿವರ್ತನೆಯಾಗುತ್ತದೆ‌. ಇದು ಇಂಜಿನ್ ಚಾಲನೆಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಂಶೋಧನೆಯ ಬಗ್ಗೆ ಭಾರತದ ಹಲವು ಉನ್ನತ ವ್ಯಕ್ತಿಗಳಲ್ಲಿ ಹೋಗಿ ವಿವರಿಸಿದರೂ ಯಾವುದೇ ಪ್ರತಿಕ್ರಿಯೆ ದೊರಕದ ಹಿನ್ನಲೆಯಲ್ಲಿ ಜಪಾನ್ ಸರ್ಕಾರದ ಬಳಿ ನನ್ನ ಸಂಶೋಧನೆ ಬಗ್ಗೆ ತಿಳಿಸಿದ್ದು, ಜಪಾನ್‍ ಸರ್ಕಾರವು ಕೂಡಲೇ ಒಪ್ಪಿಗೆ ಸೂಚಿಸಿದ್ದರಿಂದ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ.

Also Read  ವಿಮಾನ ಪತನ  19 ಮಂದಿ ಸಜೀವ ದಹನದ ಶಂಕೆ

error: Content is protected !!
Scroll to Top