ದಾರುನ್ನೂರ್ ದೇರಾ ಸಮಿತಿಗೆ ನೂತನ ಸಾರಥ್ಯ ► ಅಧ್ಯಕ್ಷರಾಗಿ ಉಸ್ತಾದ್ ಶರೀಫಿ ಅಶ್ರಫಿ, ಕಾರ್ಯದರ್ಶಿಯಾಗಿ ಇಲ್ಯಾಸ್ ಕಡಬ

(ನ್ಯೂಸ್ ಕಡಬ) newskadaba.com ದುಬೈ, ಆ.04. ದಾರುನ್ನೂರ್ ದೇರಾ ಸಮಿತಿಯ ವಾರ್ಷಿಕ ಸಭೆ ಮತ್ತು ಯುನಿಟ್ ನವೀಕರಣವು ಇತ್ತೀಚೆಗೆ ಅಶ್ರಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ರೋಯಲ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಅಶ್ರಫಿ ಉಸ್ತಾದರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ ಗೌರವಾದ್ಯಕ್ಷರಾದ ಅಬ್ದುಲ್ ಸಲಾಮ್ ಬಪ್ಪಲಿಗೆಯವರು ಮಾತನಾಡಿ ನೆರೆದವರನ್ನು ಸಭೆಗೆ ಸ್ವಾಗತಿಸಿದರು. ಸಭೆಯನ್ನು ಜನಾಬ್ ಅಬ್ಬಾಸ್ ಕೇಕುಡೆಯವರು ಅಲ್ಲಾಹನ ತಿರುನಾಮದೊಂದಿಗೆ ಉದ್ಘಾಟಿಸಿದರು. ನಾಸಿರ್ ಬಪ್ಪಲಿಗೆ ಯವರು ಗತ ವರ್ಷದ ವರದಿ ವಾಚಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅನ್ಸಾಪ್ ಪಾತೂರು ಲೆಕ್ಕ ಪತ್ರ ಮಂಡಿಸಿದರು. ಸಮಿತಿಯ ಅಧ್ಯಕ್ಷರಾದ ಬಹು! ಅಶ್ರಫಿ ಉಸ್ತಾದರು ಮಾತನಾಡಿ ಸಮಿತಿಯ ಅಭಿವೃದ್ಧಿಗಾಗಿ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿ ಹಾಲಿ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು.

ಸಭೆಗೆ ನಿರೀಕ್ಷಕರಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಮಾತನಾಡಿ ಸಮಿತಿಯ ಕಾರ್ಯವೈಕರಿಗಳನ್ನು ಪ್ರಶಂಸಿಸಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯಪೃವೃತ್ತರಾಗಬೇಕೆಂದು ಹೇಳಿದರು. ರಾಷ್ಟ್ರೀಯ ಸಮಿತಿಯ ಪ್ರಮುಖರಾದ ಉಸ್ಮಾನ್ ಕೆಮ್ಮಿಂಜೆಯವರು ಚುನಾವಣಾ ಅಧಿಕಾರಿಯಾಗಿ ನೂತನ ಪದಾಧಿಕರಿಗಳ ಆಯ್ಕೆಗೆ ಚಾಲನೆ ನೀಡಿದರು.

Also Read  ಈ ನಕ್ಷತ್ರದಲ್ಲಿ ಹುಟ್ಟಿದ ವ್ಯಕ್ತಿಗಳು ಜನ್ಮ ಕೊಟ್ಟ ತಂದೆ ತಾಯಿಗೆ ಕಂಟಕವಾಗಿರುತ್ತಾರೆ ಅದರಿಂದ ಹೊರ ಬರುವುದಕ್ಕೆ ಪರಿಹಾರ

ನೂತನ ಪದಾಧಿಕರಿಗಳ ವಿವರ:

ಗೌರವಾದ್ಯಕ್ಷರು: ಅಬ್ದುಲ್ ಸಲಾಮ್ ಬಪ್ಪಲಿಗೆ
ಅಧ್ಯಕ್ಷರು: ಶರೀಫ್ ಅಶ್ರಫಿ ಉಸ್ತಾದ್
ಪ್ರಧಾನ ಕಾರ್ಯದರ್ಶಿ: ಇಲ್ಯಾಸ್ ಕಡಬ
ಕೋಶಾದಿಕಾರಿ: ಇಫ್ತಿಕಾರ್ ಕಣ್ಣೂರು.

ಉಪಾಧ್ಯಕ್ಷರು: ಸುಲೈಮಾನ್ ಮೌಲವಿ ಕಲ್ಲೆಗ, ಅನ್ಸಾಪ್ ಪಾತೂರು, ರಝಾಕ್ ಉಸ್ತಾದ್ ಪಾತೂರು, ಅಬ್ಬಾಸ್ ಕೇಕುಡೆ.

ಕಾರ್ಯದರ್ಶಿಗಳು: ನಾಸಿರ್ ಬಪ್ಪಲಿಗೆ, ಉಸ್ಮಾನ್ ಮರೀಲ್, ಅಝೀಝ್ ಸೋಂಪಾಡಿ.

ಸಂಘಟನಾ ಕಾರ್ಯದರ್ಶಿ: ಅಶ್ರಫ್ ಪರ್ಲಡ್ಕ

ಚುನಾವಣಾ ಅಧಿಕಾರಿಯಾಗಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಉಸ್ಮಾನ್ ಕೆಮ್ಮಿಂಜೆಯವರು ನೂತನ ಸಮಿತಿಗೆ ಶುಭ ಹಾರೈಸಿದರು. ಸಭೆಯಲ್ಲಿ ಹಮೀದ್ ಮಣಿಲ ಮತ್ತು ಅಶ್ರಫ್ ಪರ್ಲಡ್ಕ ಸಮಯೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಸಭೆಯನ್ನು ಮೂರು ಸ್ವಲಾತ್ ನಲ್ಲಿ ಮುಕ್ತಾಯಗೊಳಿಸಲಾಯಿತು. ಅನ್ಸಾಫ್ ಪಾತೂರುರವರು ಕಾರ್ಯಕ್ರಮ ನಿರೂಪನೆ ಮಾಡಿದರು.

error: Content is protected !!
Scroll to Top