ಟಾಟಾ ಮುಂಬಯಿ ಮ್ಯಾರಥಾನ್ ನಲ್ಲಿ 4.27 ಗಂಟೆಗಳಲ್ಲಿ 42 ಕಿ.ಮೀ. ಕ್ರಮಿಸಿದ ಕಡಬದ ಯುವಕ ➤ ರನ್ನಿಂಗ್ ರೇಸ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಮುಡುಗೇರಿಸಿಕೊಂಡ ಕೊಣಾಜೆಯ ಹರೀಶ್

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಟಾಟಾ ಮುಂಬಯಿ ಮ್ಯಾರಥಾನ್ ನಲ್ಲಿ ಕಡಬದ ಯುವಕನೋರ್ವ 42 ಕಿಲೋಮೀಟರ್ ದೂರವನ್ನು 4 ಗಂಟೆ 27 ನಿಮಿಷಗಳಲ್ಲಿ ಕ್ರಮಿಸಿ ಸಾಧನೆಗೈದಿದ್ದಾರೆ.

ಬೆಂಗಳೂರಿನ ಟೈಟಾನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮುಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ – ಮೋಹಿನಿ ದಂಪತಿಯ ಪುತ್ರ ಹರೀಶ್ ಎಂ.ಡಿ. ಇತ್ತೀಚೆಗೆ ನಡೆದ ಭಾರತದ ನಂ. 1 ಮ್ಯಾರಥಾನ್ ಟಾಟಾ ಮುಂಬಯಿ ಮ್ಯಾರಥಾನ್ ನಲ್ಲಿ 4 ಗಂಟೆ 27 ನಿಮಿಷಗಳಲ್ಲಿ 42.195 ದೂರ ಕ್ರಮಿಸುವ ಮೂಲಕ ದಾಖಲೆಗೈದಿದ್ದಾರೆ. ಈ ಹಿಂದೆಯೂ 30 ಕಿಲೋಮೀಟರ್ ದೂರವನ್ನು 3.15 ನಿಮಿಷಗಳಲ್ಲಿ, ಬೆಂಗಳೂರು ಮ್ಯಾರಥಾನ್ 21 ಕಿಲೋಮೀಟರ್ ನ್ನು 2 ಗಂಟೆ 01 ನಿಮಿಷದಲ್ಲಿ ಕ್ರಮಿಸಿದ್ದ ಹರೀಶ್ ಹಲವು ರನ್ನಿಂಗ್ ರೇಸ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Also Read  ನಿಮ್ಮ ಕಷ್ಟಗಳು ಪರಿಹಾರ ಬೇಗ ಆಗಬೇಕೆಂದರೆ ಲಾಭ ಪಡೆಯಲು ಈ ಕೆಲಸ ಮಾಡಬೇಕು

ತನ್ನ ಈ ಹಿಂದಿನ ಸಾಧನೆಯನ್ನು ಗುರುತಿಸಿ ಕಂಪೆನಿಯ ಮ್ಯಾನೇಜರ್ ಸಹಕರಿಸಿ ಪ್ರೋತ್ಸಾಹಿಸಿದ್ದರಿಂದ ಟಾಟಾ ಮುಂಬಯಿ ಮ್ಯಾರಥಾನ್ ನಲ್ಲಿ ಸಾಧನೆಗೈಯಲು ಸಾಧ್ಯವಾಗಿದೆ ಎಂದು ಹರೀಶ್ ತನ್ನ ಮನದಾಳದಿಂದ ಕೃತಜ್ಞತೆ ವ್ಯಕ್ತಪಡಿಸಿದರು.

error: Content is protected !!
Scroll to Top