(ನ್ಯೂಸ್ ಕಡಬ) newskadaba.com ಕಡಬ, ಮೇ.03. ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಾಬು ಟವರ್ಸ್ ನ ಪ್ರಥಮ ಅಂತಸ್ತಿನಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಸುಸಜ್ಜಿತ ಹವಾನಿಯಂತ್ರಿತ ವ್ಯಾಪಾರ ಮಳಿಗೆ ‘ಪಿಲ್ಯ ಫ್ಯಾಷನ್’ ಗುರುವಾರದಂದು ಶುಭಾರಂಭಗೊಂಡಿತು.
ಉಡುಪಿ – ಚಿಕ್ಕಮಗಳೂರು ಖಾಝಿ ಶೈಖುನಾ ತಾಜುಲ್ ಪುಖಹಾಅ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್‍ರವರು ದುವಾಃ ಪ್ರಾರ್ಥನೆಗೈದು ನೂತನ ಮಳಿಗೆಯ ಯಶಸ್ವಿಗೆ ಶುಭ ಹಾರೈಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿ, ನೂತನ ಮಳಿಗೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ನುಡಿದರು. ಮರ್ದಾಳ ತಕ್‍ವೀಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಕೆ.ಎಸ್. ಶಾಹುಲ್ ಹಮೀದ್ ತಂಙಳ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್, ಕಡಬ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ಖಾದರ್, ಕಟ್ಟಡ ಮಾಲಕ ದಯಾನಂದ ನಾೈಕ್ ಮೇಲಿನಮನೆ, ಮಹಮ್ಮದ್ ಪಿಲ್ಯ, ಆದಂ ಪಿಲ್ಯ, ಝೂಬಿ ಗೋಲ್ಡ್ ನ ಯುನೂಸ್ ಕೋಡಿಕಂಡ, ಸ್ವಾದಿಕ್ ಕೋಡಿಕಂಡ, ಉದ್ಯಮಿಗಳಾದ ಮಹಾಬಲ ನಾೈಕ್ ಮೇಲಿನ ಮನೆ, ಅಶೋಕ್ ಕುಮಾರ್ ರೈ ವಜ್ರಪಾಣಿ, ಎಮ್.ಎಸ್. ಹನೀಫ್ ಮರ್ದಾಳ, ಅಬ್ದುಲ್ ರಝಾಖ್ ಬಾಖವಿ, ಸಿದ್ದೀಕ್ ಸಖಾಫಿ, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಕೆ.ಜೆ.ತೋಮಸ್, ಕಡಬ ಸೀಮಾ ಎಂಟರ್‍ಪ್ರೈಸಸ್‍ನ ಸಿರಾಜ್, ಝಿಯಾರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಶರತ್ ಕೊಡೆಕಲ್, ಶಾಕಿರ್ ಮರ್ದಾಳ, ಕಳಾರ ಶಾಲಾ ಮುಖ್ಯಶಿಕ್ಷಕ ಹಮೀದ್ ಪಾಲಪ್ಪೆ, ವಿದ್ಯುತ್ ಗುತ್ತಿಗೆದಾರ ದಿನೇಶ್, ಅಬ್ಬಾಸ್ ಮರ್ದಾಳ, ಪುತ್ತುಮೋನು ಅನ್ನಡ್ಕ, ಮಹಮ್ಮದ್, ಇಲ್ಯಾಸ್ ಜೆ.ಕೆ, ಕಡಬ ಬುರ್ಖಾ ಫ್ಯಾಲೇಸ್‍ನ ಮಾಲಕ ಖಮರುದ್ದೀನ್ ಅಲೆಕ್ಕಾಡಿ ಉಪಸ್ಥಿತರಿದ್ದರು.
ಸನ್ಮಾನ: ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಉಡುಪಿ- ಚಿಕ್ಕಮಗಳೂರು ಖಾಝಿ ಶೈಖುನಾ ತಾಜುಲ್ ಪುಖಹಾಅ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್‍ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಪಿಲ್ಯ ಫ್ಯಾಷನ್ ಮಾಲಕ ರಶೀದ್ ಪಿಲ್ಯರವರು ಅತಿಥಿಗಳನ್ನು ಹಾಗೂ ಗ್ರಾಹಕರನ್ನು ಬರಮಾಡಿಕೊಂಡು ಸ್ವಾಗತಿಸಿದರು. ಪಾಲುದಾರ ಫಾರೂಕ್ ವಂದಿಸಿದರು. ಸಿಬ್ಬಂದಿಗಳಾದ ರಿಯಾಜ್ ಪೊರಂತ್, ರಹೀಮ್ ಪಿಜಕ್ಕಳ, ನವಾಜ್ ಪನ್ಯ, ಹೈದರ್ ಹಿಂದುಸ್ಥಾನ್ ಮರ್ದಾಳರವರು ಸಹಕರಿಸಿದರು.
ಸುಸಜ್ಜಿತ ಹವಾನಿಯಂತ್ರಿತ ಮಳಿಗೆ: ಪಿಲ್ಯ ಫ್ಯಾಷನ್ ಸುಸಜ್ಜಿತ ಹವಾನಿಯಂತ್ರಿತ ವಸ್ತ್ರಗಳ ಮಳಿಗೆಯಾಗಿದ್ದು ಗ್ರಾಹಕರಿಗೆ ವಿವಿಧ ಬ್ರಾಂಡ್‍ಗಳ ವಸ್ತ್ರಗಳು ಒಂದೇ ಸೂರಿನಡಿ ದೊರೆಯಲಿದೆ. ಮದುವೆ ವಸ್ತ್ರಗಳ ಅಪೂರ್ವ ಸಂಗ್ರಹ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಪುರುಷರ, ಮಹಿಳೆಯರ ಮತ್ತು ಮಕ್ಕಳ ವಸ್ತ್ರಗಳ ಪ್ರತ್ಯೇಕ ವಿಭಾಗಗಳಿದ್ದು ಗ್ರಾಹಕರಿಗೆ ಸ್ಪರ್ದಾತ್ಮಕ ದರದಲ್ಲಿ ಗುಣಮಟ್ಟದ ವಸ್ತ್ರಗಳು ಲಭಿಸಲಿದ್ದು ಜೊತೆಗೆ ವಿಶೇಷ ರಿಯಾಯಿತಿ ಹಾಗೂ ಖಚಿತ ಉಡುಗೊರೆಯೂ ದೊರೆಯಲಿದೆ. ಸಂಸ್ಥೆಯ ಪಾಲುದಾರ ಫಾರೂಕ್‍ರವರು ಬೆಂಗಳೂರಿನಲ್ಲಿ ರೆಡಿಮೇಡ್ ವ್ಯಾಪಾರದಲ್ಲಿ ಪರಿಣತಿ ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ಅನುಭವಿ ಸಿಬ್ಬಂದಿಗಳಿಂದ ಅತ್ಯುತ್ತಮ ಸೇವೆ ಸಿಗಲಿದೆ. ಗ್ರಾಹಕರ ಸಹಕಾರ ಬಯಸುತ್ತೇವೆ.
– ರಶೀದ್ ಪಿಲ್ಯ, ಪಾಲುದಾರ
ಲಕ್ಕಿ ಕೂಪನ್: 999 ರೂ. ಮೌಲ್ಯದ ಬಟ್ಟೆ ಖರೀದಿಗೆ ಬಂಪರ್ ಬಹುಮಾನದ ಲಕ್ಕಿ ಕೂಪನ್ ಇದ್ದು ಆ.15ರಂದು ಡ್ರಾ ನಡೆಯಲಿದ್ದು ವಿಜೇತರಿಗೆ ಬಂಪರ್ ಬಹುಮಾನವಾದ ಸ್ಕೂಟಿ ದೊರೆಯಲಿದೆ. ಶುಭಾರಂಭದ ಮೊದಲ ದಿನ ಮಳಿಗೆಗೆ ಭೇಟಿ ನೀಡುವ ಗ್ರಾಹಕರಿಗಾಗಿ ಲಕ್ಕಿ ಕೂಪನ್ ಸಹ ಆಯೋಜಿಸಲಾಗಿತ್ತು.