ಹಿಂದಿ ಭಾಷೆಗೆ ಮೂರನೇ ಸ್ಥಾನ ನೀಡಿದ ಅಬುಧಾಬಿ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ದುಬೈ , ಫೆ.11. ಅಬುಧಾಬಿ  ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ ಇಲಾಖೆ ತೆಗೆದುಕೊಂಡಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.

ಅಬುಧಾಬಿಯಲ್ಲಿ ಭಾರತೀಯರು ಸೇರಿ ಏಷ್ಯಾದ ಅನೇಕ ಭಾಗಗಳ ಜನರು ಇದ್ದು ಕಾರ್ಮಿಕ  ವರ್ಗದವರು ಹಿಂದಿಯನ್ನೇ ಹೆಚ್ಚು ಬಳಸುವ ಕಾರಣ ಹಿಂದಿಯನ್ನು ನ್ಯಾಯಾಲಯದಲ್ಲಿ ಬಳಸಿದ್ದಾದರೆ ವಾದ-ಪ್ರತಿವಾದಗಳನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗಲಿದೆ.  ಅರೇಬಿಕ್ ಹಾಗೂ  ಇಂಗ್ಲೀಷ್  ಭಾಷೆಗಳು ಮೊದಲೆರಡು ಅಧಿಕೃತ ಭಾಷೆಗಳಾಗಿದ್ದು ಇದೀಗ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಗಿದೆ.ಭಾಷಾ ಸಮಸ್ಯೆಯಿಂದ ಆಗಬಹುದಾದ ಸಮಸ್ಯೆಗಳು ಇದರಿಂದ ದೂರಾಗಲಿದೆ,ಅರಬ್ ಸಂಯುಕ್ತ ಒಕ್ಕೂಟ (ಅರಬ್ ಎಮಿರೇಟ್ಸ್) ನಲ್ಲಿ ಶೇ.30ರಷ್ಟು ಭಾರತೀಯರು ವಾಸವಿದ್ದಾರೆ. ಅಬುಧಾಬಿ ನ್ಯಾಯಾಂಗ ಇಲಾಖೆಯ ನಿರ್ಧಾರದಿಂದ ಅವರಿಗೆ ಅನುಕೂಲವಾಗಲಿದೆ.

 

error: Content is protected !!
Scroll to Top