(ನ್ಯೂಸ್ ಕಡಬ) newskadaba.com ಕಡಬ, ಫೆ.09. ನಿಂತಿಕಲ್ಲು ಕೆ ಎಸ್ ಗೌಡ ವಿದ್ಯಾ ಸಂಸ್ಥೆಯಲ್ಲಿ ಟ್ರೆಂಡ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವುದರ ಕುರಿತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತು ಕಾರ್ಯಕ್ರಮವು ಫೆಬ್ರವರಿ 9 ರಂದು ನಡೆಯಿತು .
ಪರೀಕ್ಷೆ ಎಂಬ ಭಯಮುಕ್ತ ವಾತಾವರಣದಿಂದ ನಾವೆಲ್ಲರೂ ಹಿಂಜರಿಯಬೇಕು ,ಓದಿಗೆ ಸಮಯ ಮೀಸಲಿಡಬೇಕು ,ನಿದ್ದೆ ಹಾಳು ಮಾಡಿ ಓದುವುಧರಿಂದ ಏನೂ ಪ್ರಯೋಜನವಿಲ್ಲ ,ನಾವು ಒಂದು ವಿಷಯದ ಬಗ್ಗೆ ಇಷ್ಟ ಪಟ್ಟು ಓದಿ ಏಕಾಗ್ರತೆ ಮನಸ್ಸಿನಿಂದ ಓದಿನೆನೆಡೆಗೆ ಗಮನ ಹರಿಸಿದರೆ ನಮ್ಮ ಗುರಿಯನ್ನು ತಲುಪಲು ಸಾಧ್ಯ ಹಾಗೂ ಇದರಿಂದ ಯಶಸ್ಸು ಖಂಡಿತ ಎಂದು ರಾಜ್ಯ ತರಬೇತುದಾರರಾದ ಕೆ ಎಂ ಇಕ್ಬಾಲ್ ಬಾಳಿಲರವರು ತರಬೇತುಕಾರ್ಯಕ್ರಮದಲ್ಲಿ ಹೇಳಿದರು .
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆನಂದ ಬೆಳ್ಳಾರೆ ,ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಪಾದೆಕಲ್ಲು , ಮುಖ್ಯ ಗುರು ಉಮೇಶ್ ಗೌಡ ಮುಖ್ಯ ಅತಿಥಿಗಳಾಗಿದ್ದರು .ಮುಖ್ಯ ಗುರು ಉಮೇಶ್ ಗೌಡ ಸ್ವಾಗತಿಸಿ , ತುಳು ಪ್ರಾಧ್ಯಾಪಕ ಅಜಿತ್ ಗೌಡ ಐವರ್ನಾಡು ವಂದಿಸಿ ನಿರೂಪಿಸಿದರು.