ದೇವಸ್ಥಾನದ ಮೆಟ್ಟಿಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು► ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಫೆ.08. ದೇವಸ್ಥಾನದ ಮೆಟ್ಟಿಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ವರದಿಯಾಗಿದೆ.ಮೃತ ಪಟ್ಟ ಯುವಕನನ್ನು ಪುತ್ತೂರು ತಾಲೂಕು ಬಾಳ್ನಾಡು ಗ್ರಾಮ ಉಜುರು ಮನೆ ಪಂಜಳ ನಿವಾಸಿಯಾದ  ಹರೀಶ ಎಂದು ಗುರುತಿಸಲಾಗಿದೆ.

 

ಮೃತಪಟ್ಟ ವ್ಯಕ್ತಿಯು ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋಗಿದ್ದರು. ದೇವಸ್ಥಾನದ ಹತ್ತಿರ ಮೆಟ್ಟಿಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಹರೀಶ ಮೃತಪಟ್ಟಿದ್ದಾರೆ.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

Scroll to Top