➤➤ Breaking News ಸುಬ್ರಹ್ಮಣ್ಯ: ಸಿಡಿಲು ಬಡಿದು ಯುವಕ ಮೃತ್ಯು ➤ ಸುಟ್ಟು ಕರಕಲಾದ ಮೃತದೇಹ

(ನ್ಯೂಸ್ ಕಡಬ) newskadaba.com ಕಡಬ, ಫೆ.07. ಸಿಡಿಲು ಬಡಿದು ಯುವಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರ ನಿವಾಸಿ ಪ್ರವೀಣ್ (21) ಎಂದು ಗುರುತಿಸಲಾಗಿದೆ. ಕುಮಾರಧಾರಾ ಸಮೀಪ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಗಂಭೀರ ಗಾಯಗೊಂಡ ಪ್ರವೀಣ್ ನನ್ನು ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದಾರೆ. ಮೃತದೇಹದ ಅರ್ಧಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

Also Read  ಉಡುಪಿಯಲ್ಲಿ ಕೋವಿಡ್ ಸ್ಪೋಟ ➤ ಒಂದೇ ದಿನ 210 ಜನರಿಗೆ ಸೋಂಕು ದೃಢ

error: Content is protected !!
Scroll to Top