(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.02.ಗ್ರಾಮೀಣ ಜನವಸತಿಗಳಲ್ಲಿ ಬೇಸಿಗೆ ಕಾಲದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮವಹಿಸುವ ಕುರಿತು ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಗಳೂರು ಇವರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.
ತಾಲೂಕು ಪಂಚಾಯತ್ ಮಂಗಳೂರು – 0824-2423675(ತಾಲೂಕು ಮಟ್ಟ), ತಾಲೂಕು ಪಂಚಾಯತ್ ಬಂಟ್ವಾಳ – 08255-233339(ತಾಲೂಕು ಮಟ್ಟ), ತಾಲೂಕು ಪಂಚಾಯತ್ ಪುತ್ತೂರು – 08251-232361 (ತಾಲೂಕು ಮಟ್ಟ), ತಾಲೂಕು ಪಂಚಾಯತ್ ಬೆಳ್ತಂಗಡಿ – 08256-232026(ತಾಲೂಕು ಮಟ್ಟ), ತಾಲೂಕು ಪಂಚಾಯತ್ ಸುಳ್ಯ – 08257-230336 (ತಾಲೂಕು ಮಟ್ಟ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಗಳೂರು 0824-2220583(ಜಿಲ್ಲಾ ಮಟ್ಟ) ಸಾರ್ವಜನಿಕರು ನೀರಿನ ಸಮಸ್ಯೆ ಇದ್ದಲ್ಲಿ ಈ ದೂರವಾಣಿಗಳನ್ನು ಸಂಪರ್ಕಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.