ಸರಳತೆ ಮೆರೆದ ಸಂಸದ ನಳಿನ್ ಕುಮಾರ್ ► ಸಾಮಾನ್ಯ ಕ್ಯಾಂಟೀನ್ ನಲ್ಲಿ ಗಂಜಿ ಸವಿದ ಕಟೀಲ್

(ನ್ಯೂಸ್ ಕಡಬ) newskadaba.com.ಕಾಣಿಯೂರು,ಜ.18. ಸರಳ ಜೀವನಕ್ಕೆ ಮಾದರಿಯಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಕಡಬದಲ್ಲಿ ಸಾಮಾನ್ಯ ಗಂಜಿ ಊಟದ ಹೋಟೇಲೊಂದರಲ್ಲಿ ಗಂಜಿ ಸವಿಯುವ ಮೂಲಕ ಮತ್ತೊಮ್ಮೆ ಸರಳತೆ ಮೆರೆದರು.ಕಡಬ ಬಿಜೆಪಿ ಕಾರ್ಯಕರ್ತರ ಅಭ್ಯಾಸವರ್ಗಕ್ಕೆ ಆಗಮಿಸಿದ್ದ ಸಂಸದರು ಮಧ್ಯಾಹ್ನ ಕಡಬ ಠಾಣೆಯ ಎದುರು ಇರುವ ಹಳೆಯ ಕಾಲದ ಸಣ್ಣ ಹೋಟೇಲಲ್ಲಿ ಕಾರ್ಯಕರ್ತರೊಂದಿಗೆ ಊಟ ಮಾಡಿ ಇತರ ನಾಯಕರುಗಳುಗೆ ಆದರ್ಶರಾದರು.

 

ಸುಮಾರು ಮೂರು ದಶಕಗಳ ಇತಿಹಾಸ ಇರುವ ಕ್ಯಾಂಟೀನ್ ಮಾದರಿಯ ಎರಡು ಸೆಟ್ಟು ಟೇಬಲ್, ಒಂದು ತಿಂಡಿಯ ಕಪಾಟು ಇರುವ ಕಿರಿದಾದ ಗೋಪಲ ಗೌಡ ಶ್ರೀದೇವಿ ಪ್ರಸಾದ್ ಹೋಟೇಲಲ್ಲಿ ಸಂಸದರು  ಊಟ ಮಾಡಿ ಕಾರ್ಯಕರ್ತರಿಗೆ ಸರಳತೆಯ ಪಾಠಮಾಡಿದರು. ಶುಧ್ಧ ಸಸ್ಯಾಹಾರಿಯಾಗಿರುವ ನಳಿನ್ ಕುಮಾರ್ ಹೋದಲ್ಲೆಲ್ಲಾ ಮಿತ ಆಹಾರ ಸೇವನೆ ಮಾಡುವುದು ವಾಡಿಕೆ, ಗೋಪಾಲಣ್ಣನ ಹೋಟೇಲ್‍ನಲ್ಲಿ ಕೂಡಾ ಮಿತವಾಗಿ ಊಟ ಮಾಡಿದರು. ಬಳಿಕ ಹತ್ತಿರದಲ್ಲೇ ಇರುವ ಬಿಜೆಪಿ ಸುಳ್ಯ ಮಂಡಲ ಅಲ್ಪಸಂಖ್ಯಾತ ಮೋರ್ಚಾದಾ ಪ್ರಧಾನ ಕಾರ್ಯದರ್ಶಿ ಫಯಾಝ್ ಅವರ ಫರ್ನಿಚರ್ ಅಂಗಡಿಯಲ್ಲಿ ಕೆಲಕಾಲ ಕೂತು ಕಾರ್ಯಕರ್ತರೊಂದಿಗೆ ಮಾತನಾಡಿದರು.  ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಪುತ್ತೂರು ಮಂಡಲ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ. ಕಡಬ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ, ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಎ.ಪಿ.ಎಂ.ಸಿ ನಿರ್ದೆಶಕಿ ಪುಲಸ್ತ್ಯಾ ರೈ, ಲಕ್ಷ್ಮೀನಾರಾಆಯಣ ರಾವ್ ಆತೂರು ಮತ್ತಿತರರು ಸಾಥ್ ನೀಡಿದರು.

Also Read  ಕೆಮ್ಮಾರ ಸರಕಾರಿ ಶಾಲೆಯಲ್ಲಿ ಸ್ವಾತಂತ್ರೊತ್ಸವದ ಪ್ರಯುಕ್ತ ಧ್ವಜಾರೋಹಣ ಮತ್ತು ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ*

 

ನಮ್ಮ ಚಿಕ್ಕ ಹೋಟೇಲ್‍ಗೆ ಸರಳತೆಗೆ ಹೆಸರಾದ ಸುಳ್ಯ ಶಾಸಕ ಎಸ್.ಅಂಗಾರ ಹಲವು ಬಾರಿ ಬಂದು ಗಂಜಿ ಊಟ ಮಾಡಿ ಹೋಗಿದ್ದಾರೆ. ಇದೀಗ ಸಂಸದರ ಕೂಡಾ ಬಂದು ಗಂಜಿ ಊಟ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ. ಇಂತಹ ಶಾಸಕರು ಹಾಗೂ ಸಂಸದರು ಸರಳತೆ ಇತರರಿಗೆ ಮಾದರಿಯಾಗಿದೆ.
ಗೋಪಾಲ ಗೌಡ ತುಂಬೆತಡ್ಕ
ಹೋಟೇಲ್ ಮಾಲಕರು

Also Read  ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ವ್ಯಾಪಕ ಹಾನಿ ಜನಜೀವನ ಅಸ್ತವ್ಯಸ್ತ

error: Content is protected !!
Scroll to Top