ನಾಣಿಲ ಶಾಲಾ ನಿವೃತ ಮುಖ್ಯಗುರು ಬೇಬಿ ಅವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com.ಕಾಣಿಯೂರು,ಜ.17. ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷ ಕಿಯಾಗಿ ಸೇವೆ ಸಲ್ಲಿಸಿ ನಿವೃತರಾದ ಬೇಬಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಸಮಾರಂಭದ ಅಧ್ಯಕ್ಷ ತೆಯನ್ನು ಕಾಣಿಯೂರು ಗ್ರಾ.ಪಂ ಸದಸ್ಯ ಗಣೇಶ್ ಉದುನಡ್ಕ ವಹಿಸಿದ್ದರು.

ಈ ಸಂದರ್ಭ  ದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ  ಕಾಣಿಯೂರು ಗ್ರಾ.ಪಂ ಸದಸ್ಯ ವೀರಪ್ಪ ಗೌಡ ಉದ್ಲಡ್ಡ, ಮಾಜಿ ಅಧ್ಯಕ್ಷ  ದೇವಯ್ಯ ಖಂಡಿಗ, ಕಾಣಿಯೂರು ಗ್ರಾ.ಪಂ ಸದಸ್ಯ ಪದ್ಮನಾ ಅಂಬುಲ, ಎಸ್‍ಡಿಎಂಸಿ ಉಪಾಧ್ಯ ಕ್ಷೆ ಸುನಂದ ಕುಕ್ಕನಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ ಅಂಬುಲ ಉಪಸ್ಥಿತರಿದ್ದರು.ಶಾಲಾ ಪ್ರಭಾರ ಮುಖ್ಯಗುರು ಮೋಹಿನಿ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಸಹಶಿಕ್ಷಕಿ ದಯಾ ನಿವತ್ತರ ಪರಿಚಯ ವಾಚಿಸಿದರು. ಸಹಶಿಕ್ಷ ಕಿ ಜೆಸಿಂತಾ ಲೋಬೊ ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.

Scroll to Top