ನ್ಯೂಸ್ ಕಡಬ) newskadaba.com.ಸವಣೂರು,ಜ.17. ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯು ದೇವಾಲಯದ ವಠಾರದಲ್ಲಿ ನಡೆಯಿತು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮರೈಯವರು ಅಧ್ಯಕ್ಷತೆ ವಹಿಸಿ, ಮಾತನಾಡಿ ,ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸವಣೂರಿನ ಹಬ್ಬವಾಗಬೇಕು, ಊರ-ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿವಿಧ ಸಮಿತಿಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಂಚಾಲಕರು ಮತ್ತು ಸದಸ್ಯರುಗಳು ಹೆಚ್ಚಿನ ಮುತುವರ್ಜಿಯಿಂದ ಕೆಲಸವನ್ನು ಮಾಡಬೇಕು ಎಂದರು.

ದೇವಾಲಯದ ಆಡಳಿತ ಮೊಕ್ತೇಸರ ಡಾ,ರತ್ನಾಕರ ಶೆಟ್ಟಿ ಸವಣೂರುಗುತ್ತು, ಜೀರ್ಣೋಧ್ದಾರ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ದೇವಾಲಯ ಅರ್ಚಕ ನಾರಾಯಣ ಬಡೆಕಿಲ್ಲಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ರೆ` ನೋಲ್ಮೆ, ಸಾಗ್ವತ ಸಮಿತಿ ಸದಸ್ಯ ಗಣೇಶ್ ಶೆಟ್ಟಿ ಕುಂಜಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಅರಿಯಡ್ಕ ಮಹಿಳಾನಾಥ್ ಶೆಟ್ಟಿ ಸಾಂತ್ಯ ಸವಣೂರು ಎನ್ ಸುಂದರ ರೆ, ಮೋಹನದಾಸ ಶೆಟ್ಟಿ ಸವಣೂರುಗುತ್ತು, ಅಲಂಕಾರ ಸಮಿತಿ ಸಮಿತಿಯ ಸಂಚಾಲಕ ಪ್ರಜ್ವಲ್ ಕೆ.ಆರ್ ಕೋಡಿಬೈಲು, ವಿಠಲ.ರೈ ನೆಕ್ಕರೆ, ಸುಪ್ರೀತ್ರ್ ರೈ ಖಂಡಿಗ, ತಾರಾನಾಥ ಸವಣೂರು, ಪ್ರಪುಲ್ಲಚಂದ್ರ ರೈ ಕುಂಜಾಡಿ, ದಯಾನಂದ ಮಾಲೆತ್ತಾರು ಸಹಿತ ನೂರಾರು ಮಂದಿ `ಭಾಗವಹಿಸಿದರು.ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಬೆಳಿಯಪ್ಪ ಗೌಡ ಸ್ವಾಗತಿಸಿ, ರಾಘುವ ಗೌಡ ಸವಣೂರು ವಂದಿಸಿದರು. ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ಕಾರ್ಯಕ್ರಮ ನಿರೂಪಿಸಿದರು.
