ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು

(ನ್ಯೂಸ್ ಕಡಬ) newskadaba.com ಕಡಬ,ಜ.16. ರೆಂಜಿಲಾಡಿ ಗ್ರಾಮದ ಮೀನಾಡಿ ಹಿ.ಪ್ರಾ. ಶಾಲೆಯಲ್ಲಿ ಸೇವೆಸಲ್ಲಿಸಿದ್ದ ನಿವೃತ್ತ ಶಿಕ್ಷಕರೋರ್ವರು ತನ್ನ ಪತ್ನಿ ಶಿಕ್ಷಕಿಯ ಸ್ಮರಣಾರ್ಥ ಮೀನಾಡಿ ಶಾಲೆಗೆ ಜ.12ರಂದು ಬೇಟಿ ನೀಡಿ ಆರ್ಥಿಕ ನೆರವು ಹಸ್ತಾಂತರಿಸಿದರು.1968 – 70ರಲ್ಲಿ ಮೀನಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ, ಪ್ರಸ್ತುತ ಮಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಬಿ. ಕೃಷ್ಣ ರವರು 49 ವರ್ಷಗಳ ಬಳಿಕ ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ಧ ಮೀನಾಡಿ ಶಾಲೆಗೆ ಬೇಟಿ ನೀಡಿ ತನ್ನ ಪತ್ನಿ ಶಿಕ್ಷಕಿಯಾಗಿದ್ದ ದಿ| ಸುಮತಿ ಜಿ. ರವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ, ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯ ಕೆ.ಜೆ. ತೋಮಸ್ ಬಿ.ಕೃಷ್ಣರವರು ನೀಡಿದ ಆರ್ಥಿಕ ನೆರವನ್ನು ಪಡೆದ ವಿದ್ಯಾರ್ಥಿಗಳು ಉತ್ತಮ ಸುಶಿಕ್ಷಿತರಾಗಲಿ ಎಂದು ಹೇಳಿ ಕೃತಜ್ಷತೆ ಸಲ್ಲಿಸಿದರು. ಬಿ.ಕೃಷ್ಣ ರವರ ವಿದ್ಯಾರ್ಥಿಯಾಗಿದ್ದ ಟಿ.ಜೆ. ಜೋಸೆಫ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುತ್ತು ಕುಂಞ ರವರು ಸಂದರ್ಭೋಚಿತವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಬಿ. ಕೃಷ್ಣರವರು ತಾನು ಸರಕಾರಿ ನೌಕರಿಗೆ ಸೇರಿ ಪ್ರಥಮವಾಗಿ ಈ ಶಾಲೆಗೆ ಬಂದಿದ್ದು ಇಲ್ಲಿಯ ಜನರ ಸಹಕಾರವನ್ನು ಕೊಂಡಾಡಿದ ಅವರು ಪತ್ನಿಯ ಇಚ್ಚೆಯಂತೆ ತಾನು ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದೇನೆ ಎಂದರು. ಶಾಲಾ ಮುಖ್ಯ ಶಿಕ್ಷಕಿ ದಮಯಂತಿ ಸ್ವಾಗತಿಸಿ, ಸಹಶಿಕ್ಷಕಿ ಪ್ರಿಯಾ ಸಾಜನ್ ವಂದಿಸಿದರು. ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Also Read  ಪಂಜ: ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ► ಆರೋಪಿಗಳಿಬ್ಬರ ಬಂಧನ

error: Content is protected !!
Scroll to Top