(ನ್ಯೂಸ್ ಕಡಬ) newskadaba.com.ಕಡಬ,ಜ.13. ರಾಷ್ಟ್ರ ನಿರ್ಮಾಣದಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಯುವಶಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಒಂದಾಗಬೇಕು. ಆಯುಷ್ಮಾನ್ ಭಾರತ ಮತ್ತು ಜನ ಔಷಧಿ ಯೋಜನೆಗಳು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಯೋಜನೆಗಳು ಸಾಮಾನ್ಯ ಜನರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಹೇಳಿದರು.ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕವು ಆಯೋಜಿಸಿದ್ದ “ಭಾರತೀಯ ಜನ ಔಷಧಿ ಪರಿಯೋಜನೆ (ಭಾ ಜ ಪ)” ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಒಂದು ಯೋಜನೆ ಜಾರಿಗೆ ಬಂದಾಗ ಅದರ ಉದ್ದೇಶ ಮತ್ತು ಉಪಯೋಗದ ಕುರಿತು ತಿಳಿದುಕೊಳ್ಳಬೇಕು ಬಳಿಕ ಆ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಡಬೇಕು. ಜನ ಔಷಧಿ ಮತ್ತು ಆಯುಷ್ಮಾನ್ ಭಾರತ ಯೋಜನೆಯು ಸಮಾಜದ ಪ್ರತಿಯೋಬ್ಬ ಪ್ರಜೆಗೂ ತುಂಬಾ ಸಹಾಯಕವಾಗಿದೆ. ಈ ಯೋಜನೆಯ ಮಾಹಿತಿಯ ಕೊರತೆಯಿಂದ ಜನರು ಸುಳ್ಳು ಸುದ್ದಿಯನ್ನು ಹರಡಿ ಯೋಜನೆಯು ವಿಫಲವಾಗುವಂತೆ ಮಾಡುತ್ತಾರೆ. ಯೋಜನೆಯ ಬಗ್ಗೆ ಸ್ವಂತವಾಗಿ ವಿಮರ್ಶಿಸಿ ಅನುಭವಿಸಿ ತಿಳಿದುಕೊಳ್ಳಬೇಕು. ಜನ ಔಷಧಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಸಾಮಾನ್ಯ ಪ್ರಜೆ ಪಡೆಯಬಹುದಾದ ಯೋಜನೆಯಾಗಿದೆ.
ಮಂಗಳೂರು ಎ ಜೆ ಆಸ್ಪತ್ರೆ ನೇತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಸುಧೀರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ , ಸಮಾಜದ ಎಲ್ಲರ ಆರೋಗ್ಯವು ಉತ್ತಮವಾಗಿರಬೇಕು ಮತ್ತು ದೇಶದ ಪ್ರಗತಿಗಾಗಿ ಇಂತಹ ಯೋಜನೆಯನ್ನು ಭಾರತ ಸರಕಾರವು ಆರಂಭಿಸಿದೆ. ಈ ಯೋಜನೆಯಿಂದ 30 ರಿಂದ 80 ಶೇಕಡಾದಷ್ಟು ಕಡಿಮೆ ಬೆಲೆಗೆ ಸಿಗುತ್ತವೆ ಆದ್ದರಿಂದ. ಇದೊಂದು ಮಹತ್ವಪೂರ್ಣವಾದ ಯೋಜನೆಯಾಗಿದೆ, ಸಾಮಾಜಿಕ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಇಂತಹ ಯೋಜನೆಗಳ ಬಗ್ಗೆ ತಳಮಟ್ಟದ ಜನರಿಗೆ ಮಾಹಿತಿ ನೀಡಬೇಕು, ಈ ಯೋಜನೆ ಪ್ರತಿಯೊಂದು ಮನೆಗೂ ತಲುಪಬೇಕು ಮತ್ತು ಸಂಪೂರ್ಣವಾಗಿ ಎಲ್ಲರೂ ಈ ಯೋಜನೆಯ ಫಲ ಪಡೆಯಬೇಕು ಎಂದರು.ಕಾಲೇಜಿನಪ್ರಾಂಶುಪಾಲ ಡಾ. ಸಂಕೀರ್ತ ಹೆಬ್ಬಾರ್ ಅದ್ಯಕ್ಷತೆ ವಹಿಸಿದ್ದರು. ಯೂತ್ ರೆಡ್ ಕ್ರಾಸ್ ಸಂಘದ ಸಂಚಾಲಕ ರಘರಾಮ್ ಉಪಸ್ಥಿತರಿದ್ದರುವಿದ್ಯಾರ್ಥಿನಿಯರಾದ ಶ್ಲಾಘ್ಯ ಆಳ್ವ ಸ್ವಾಗತಿಸಿ, ಚೈತ್ರಾ ವಂದಿಸಿದರು. ಹರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.