ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮದುವೆಗೆ ತೆರಳುತ್ತಿದ್ದಾಗ ನದಿಗೆ ಉರುಳಿಬಿದ್ದ ಕಾರು► ಮಹಿಳೆ ಮೃತ್ಯು – News Kadaba

ಮದುವೆಗೆ ತೆರಳುತ್ತಿದ್ದಾಗ ನದಿಗೆ ಉರುಳಿಬಿದ್ದ ಕಾರು► ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.12.ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್ ಅವರು ಮದುವೆಗೆಂದು ಕುಟುಂಬ ಸಮೇತ ಬೊಲೆರೋ ವಾಹನದಲ್ಲಿ ತೆರಳಿದ್ದರು.ಆದರೆ ವಾಹನ ಸಮೇತ ಸೇತುವೆಯಿಂದ ಕೆಳಕ್ಕುರುಳಿದ ಘಟನೆ ನಡೆದಿದೆ. ವಾಹನದಲ್ಲಿದ್ದ ಬೋಳ ಗ್ರಾಮದ ಮಹಿಳೆ ಡಯಾನಾ (45ವರ್ಷ) ಮೃತಪಟ್ಟಿದ್ದಾರೆ.

 

ಮಂಗಳೂರಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾಹನದಲ್ಲಿ ಅವರ ಜೊತೆ ಅವರ ಕುಟುಂಬ ಸದಸ್ಯರಾದ ಸ್ಟ್ಯಾನಿ ಅವರ ಪತ್ನಿ ಡಯಾನಾ, ಮಕ್ಕಳಾದ ಶೆಲ್ಡನ್ ಮತ್ತು ಅರ್ಮಾನ್ ಜೊತೆಯಾಗಿ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಂಕಲಕರಿಯ ಸಮೀಪ ಶಾಂಭವಿ ನದಿ ಸೇತುವೆ ಮೇಲಿಂದ ಇವರಿದ್ದ ಬುಲೇರೋ ವಾಹನ ನದಿಗೆ ಬಿದ್ದಿದೆ.ನದಿಗುರುಳಿದ ವಾಹನ ಕಂಡು ಸ್ಥಳೀಯರು ತಕ್ಷಣ ನೀರಿಗೆ ಧುಮುಕಿ ಮೂವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಡಯಾನಾ ಅವರು ಮೃತಪಟ್ಟಿದ್ದಾರೆ.

Scroll to Top