ರಾಮಕುಂಜ: ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ ನಿಧನ

(ನ್ಯೂಸ್ ಕಡಬ) newskadaba.com.ರಾಮಕುಂಜ,ಜ.12. ಕಡಬ: ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪವಿತ್ರಪಾಣಿ, ನಿವೃತ್ತ ಶಿಕ್ಷಕ, ಇರಕಿಮಠ ನಿವಾಸಿ ರಾಮಕುಂಜ ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ(98)ರವರು ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.ವೆಂಕಟ್ರಮಣ ಉಪಾಧ್ಯಾಯರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ರಾಮಕುಂಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಪವಿತ್ರಪಾಣಿಯಾಗಿದ್ದರು. ಇರಕಿಮಠ ಮುಖ್ಯಪ್ರಾಣಗೋಪಾಲಕೃಷ್ಣ ದೇವಸ್ಥಾನದ ಆಡಳಿತದಾರರೂ ಆಗಿದ್ದರು. ರಾಮಕುಂಜೇಶ್ವರ  ಹಿ.ಪ್ರಾ.ಶಾಲೆಯಲ್ಲಿ ಸುಮಾರು 32 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಹಿರಿಯ ಪುರೋಹಿತರಾಗಿದ್ದು ದೇವಸ್ಥಾನದ ಕೆಲಸಗಳಲ್ಲಿ ಸಕ್ರೀಯರಾಗಿ ತೊಡಗಿಕೊಳ್ಳುತ್ತಿದ್ದರು. ಅಲ್ಲದೇ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದರು.ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Also Read  ಕಾರ್ ಸ್ಟ್ರೀಟ್ ಸರಕಾರಿ ಕಾಲೇಜಿನಲ್ಲಿ "ಬಿಸಿನೆಸ್ ಲ್ಯಾಬ್" ಶೀಘ್ರ ಆರಂಭ

 

 

 

error: Content is protected !!
Scroll to Top