(ನ್ಯೂಸ್ ಕಡಬ) newskadaba.com..ಕಡಬ,ಜ.12.ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಮಾದರಿ ಹಿ.ಪ್ರಾ.ಶಾಲೆಗೆ ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಪ್ರತಿಷ್ಠಾನದ ಕಡಬ ಗ್ರಾಮ ಸಮಿತಿಯ ಮೂಲಕ ಶುದ್ಧ ನೀರಿನ ಘಟಜವನ್ನು ಕೊಡುಗೆಯಾಗಿ ನೀಡಲಾಯಿತು.ಸುಮಾರು 18 ಸಾವಿರ ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಉದ್ಘಾಟಿಸಿದರು.ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾಶಿವ ಆಚಾರ್ ಮುಖ್ಯ ಅತಿಥಿಯಾಗಿ ಭಾಗಮಿಸಿದ್ದರು.
ಗ್ರಾಮ ಸಮಿತಿಯ ಕಾರ್ಯದರ್ಶಿ ಸೀತಾರಾಮ ಗೌಡ ಎ., ಉಪಾಧ್ಯಕ್ಷ ಸೋಮಪ್ಪ ನಾೈಕ್ ಕಡಬ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯ ಮೇಲ್ವಿಚಾರಕ ಬಾಬು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಗೌಡ ನೈತ್ತಿಮಾರ್, ಉಪಾಧ್ಯಕ್ಷೆ ಭವಾನಿ, ಶಿಕ್ಷಕಿಯರಾದ ಭುವನೇಶ್ವರಿ, ಗೀತಾ ಮೇಲಿನಮನೆ, ಅತಿಥಿ ಶಿಕ್ಷಕಿ ಅಶಾಲತ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶುದ್ಧ ನೀರಿ ಘಟಕ ಕೊಡಮಾಡುವಲ್ಲಿ ಕಾರಣಕರ್ತರಾದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಆಚಾರ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ಪ್ರತಿಷ್ಠಾನದ ಗ್ರಾಮ ಸಮಿತಿಯ ಉಪಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಪ್ರಸ್ತಾವನೆಗೈದರು. ಶಾಲಾ ಮುಖ್ಯಶಿಕ್ಷಕ ಹರಿಪ್ರಸಾದ್ ಉಪಾಧ್ಯಾಯ ಸ್ವಾಗತಿಸಿದರು. ಮಿನಿ ವರ್ಗೀಸ್ ವಂದಿಸಿದರು. ಶಿಕ್ಷಕ ದಾಮೋದರ ಗೌಡ ಕಾರ್ಯಕ್ರಮ ನಿರೂಪಿಸಿದರು.