ಕಡಬ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳರ ಕೈಚಳಕ ► ನೂಜಿಬಾಳ್ತಿಲ ಚರ್ಚ್‌ನ ಕಾಣಿಕೆ ಡಬ್ಬಿ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ‌ ಬೆಥನಿ ಚರ್ಚ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹರಕೆ ಡಬ್ಬಿಯನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬುಧವಾರ ಅಪರಾಹ್ನ ಬೆಳಕಿಗೆ ಬಂದಿದೆ.

ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಸಂಭ್ರಮಾಚರಣೆಯಲ್ಲಿ ಇರುವುದರಿಂದ ಇದೇ ಸಂದರ್ಭದಲ್ಲಿ ಕಳ್ಳರು ತಮ್ಮ‌ ಕೈಚಳಕವನ್ನು ತೋರಿದ್ದಾರೆ. ಹರಕೆ ಡಬ್ಬಿಯಲ್ಲಿ ಕಾಣಿಕೆ ಹಣ ಇರುವುದನ್ನರಿತ ಕಳ್ಳರು ಡಬ್ಬಿಯನ್ನೇ ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ, ಗುರುತು ಸಿಗಬಾರದೆನ್ನುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನವನ್ನೇ ಬಳಸಿದ್ದಾರೆ. ನೂಜಿಬಾಳ್ತಿಲ ಸಮೀಪದ ಪೇರಡ್ಕ ಹಾಗೂ ಇಚಿಲಂಪಾಡಿ ಪರಿಸರದಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಯನ್ನೂ ಕಳ್ಳರು ಜೊತೆಗೆ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‌ಡಿಪಿಐ - ಬಿಜೆಪಿ ಒಳ ಒಪ್ಪಂದ ► ಕಾಂಗ್ರೆಸ್ ಮುಖಂಡ ಪ್ರಕಾಶ್ ಕಾಜವ ಆರೋಪ

error: Content is protected !!
Scroll to Top