ಸುಳ್ಯ: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು ► ಶಾಮಿಯಾನ ಹಾಕುತ್ತಿದ್ದ ವೇಳೆ ದುರ್ಘಟನೆ



(ನ್ಯೂಸ್ ಕಡಬ) newskadaba.com ಸುಳ್ಯ, ಡಿ.27. ವಿದ್ಯುತ್ ಶಾಕ್ ತಗಲಿದ ಪರಿಣಾಮ ಮನೆಯೊಂದರಲ್ಲಿ ಶಾಮಿಯಾನ ಹಾಕುತ್ತಿದ್ದ ಯುವಕನೋರ್ವ ಮೃತಪಟ್ಟ ಘಟನೆ ಗುರುವಾರದಂದು ಸುಳ್ಯದಲ್ಲಿ ನಡೆದಿದೆ.







ಮೃತ ಯುವಕನನ್ನು ಸುಳ್ಯ ತಾಲೂಕಿನ ಎಲಿಮಲೆ ಸಮೀಪದ ಉಳಿಯ ನಿವಾಸಿ ದಿ| ಸತ್ಯನಾರಾಯಣ ಗೌಡ ಎಂಬವರ ಪುತ್ರ ಪ್ರೀತೇಶ್(19) ಎಂದು ಗುರುತಿಸಲಾಗಿದೆ. ಎಲಿಮಲೆಯ ಮನೆಯೊಂದರಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದ ನಿಮಿತ್ತ ಪ್ರೀತೇಶ್ ಇತರರೊಂದಿಗೆ ಶಾಮಿಯಾನ ಹಾಕಲೆಂದು ತೆರಳಿದ್ದು, ಈ ವೇಳೆ ವಿದ್ಯುತ್ ಶಾಕ್‌ ಹೊಡೆದು ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗನ ಅಗಲಿಕೆಯಿಂದ ತಾಯಿಯ ರೋಧನ ಮುಗಿಲು ಮುಟ್ಟಿತ್ತು.






error: Content is protected !!
Scroll to Top