ಕಡಬ: 39ನೇ ಸಂಯುಕ್ತ ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ವತಿಯಿಂದ ನಡೆಯುವ 39 ನೇ ವರ್ಷದ ಸಂಯುಕ್ತ ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಪರಿಸರದ ಎಲ್ಲಾ ಚರ್ಚುಗಳ ಕ್ರೈಸ್ತ ಬಾಂಧವರು ಕಡಬದ ಕಾಲೇಜು ರಸ್ತೆಯ ಬಳಿಯಿಂದ ಪೇಟೆಯ ಹೃದಯಭಾಗದ ಮೂಲಕ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ ಬಳಿಕ ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದಲ್ಲಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ‌ಪೂಜ್ಯ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಮುಖ್ಯ ಅತಿಥಿಯಾಗಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಎ.ಸಿ.ವಿನಯರಾಜ್, ಆಗ್ನಿಸಿಯಾ ಫ್ರಾಂಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಯಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪ್ರಕಟಣೆ ತಿಳಿಸಿದೆ.

Also Read  ವಿಧಾನಸಭಾ ಚುನಾವಣಾ ಹಿನ್ನೆಲೆ- ಅನಧಿಕೃತ ಬ್ಯಾನರ್ ಗಳ ತೆರವು, ಸಭೆ-ಸಮಾರಂಭಗಳ ಮೇಲೆ ನಿಗಾ ➤ ದ.ಕ. ಜಿಲ್ಲಾಧಿಕಾರಿ ಸೂಚನೆ

error: Content is protected !!
Scroll to Top