ಕಡಬ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ



(ನ್ಯೂಸ್ ಕಡಬ) newskadaba.com ಕಡಬ, ಡಿ.26. ಉಪ್ಪಿನಂಗಡಿಗೆಂದು ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಮಂಗಳವಾರ ತಡರಾತ್ರಿ ಕೊಯಿಲ ಸಮೀಪದ ರಸ್ತೆಬದಿಯಲ್ಲಿ ಪತ್ತೆಯಾಗಿದೆ.







ಕಡಬ ತಾಲೂಕು ಕೊಯಿಲ ಗ್ರಾಮದ ಹೊಸಮಜಲು ಆನೆಗುಂಡಿ ನಿವಾಸಿ ಡಿಂಬಯ್ಯ ಮುಗೇರ(58) ಎಂಬವರು ಭಾನುವಾರದಂದು ಉಪ್ಪಿನಂಗಡಿ ಪೇಟೆಗೆಂದು ಹೋದವರು ಹಿಂತಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಕಾರಣ ಅವರ ಪುತ್ರ ದುರ್ಗಾ ಪ್ರಸಾದ್ ಕಡಬ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ತಡರಾತ್ರಿ ಕೊಯಿಲ ಸಮೀಪ ರಸ್ತೆ ಬದಿಯ ಚರಂಡಿಯಲ್ಲಿ ಮೃತದೇಹವು ಕಂಡುಬಂದಿದ್ದು, ಬುಧವಾರದಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.






error: Content is protected !!
Scroll to Top