ಬೆಳ್ಳಾರೆ ಪೊಲೀಸ್ ಠಾಣಾ ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆ ► ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಾಕಥಾನ್

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.21. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಯ ವತಿಯಿಂದ ನಿಂತಿಕಲ್ಲು ಕೆ.ಎಸ್.ಗೌಡ ಕಾಲೇಜಿನ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶುಕ್ರವಾರದಂದು ಬೆಳ್ಳಾರೆಯಲ್ಲಿ ವಾಕಥಾನ್ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ನಿಂತಿಕಲ್ಲು ಕೆ.ಎಸ್. ಗೌಡ ಶಿಕ್ಷಣ ಸಂಸ್ಥೆಯ ಅಶೋಕ್ ಕುಮಾರ್, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಐ ಈರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೆಳ್ಳಾರೆಯ ವಿವಿಧ ಸಂಘ ಸಂಸ್ಥೆಗಳು, ಪೆರುವಾಜೆ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಸರ್ಕಾರಿ ಕಾಲೇಜು, ಜ್ಞಾನ ದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಹಾಗೂ ಕೆ.ಎಸ್. ಗೌಡ ಕಾಲೇಜಿನ ವಿದ್ಯಾರ್ಥಿಗಳಿಂದ ಬೆಳ್ಳಾರೆ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಬೆಳ್ಳಾರೆ ಪೇಟೆಯವರೆಗೆ ವಾಕಥಾನ್ ನಡೆಯಿತು.

Also Read  ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ ➤ ಸ್ಥಳೀಯರಿಂದ ರಕ್ಷಣೆ

error: Content is protected !!
Scroll to Top