ಬೆಳ್ಳಾರೆ: ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕಿಯರಿಬ್ಬರು ಮೃತ್ಯು ► ಬಾರದ ಲೋಕಕ್ಕೆ ತೆರಳಿದ ಸಹೋದರರ ಮಕ್ಕಳು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.15. ನೀರಿನ ಟ್ಯಾಂಕ್‌ ಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟ ದಾರುಣ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆಯಲ್ಲಿ ಶನಿವಾರ ಸಂಜೆ ನಡೆದಿದೆ.

 

ಮೃತ ಬಾಲಕಿಯರನ್ನು ಕೊಳ್ತಿಗೆ ಗ್ರಾಮದ ಮೂಲ್ಯತ್ತಡ್ಕ ನಿವಾಸಿ ಮುತ್ತಪ್ಪ ಗೌಡ ಎಂಬವರ ಪುತ್ರಿ ಕೊಳ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಂಜನಾ (11) ಹಾಗೂ ಅವರ ಸಹೋದರನ ಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ಪ್ರಜ್ಞಾ (12) ಎಂದು ಗುರುತಿಸಲಾಗಿದೆ. ಎಂದಿನಂತೆ ಜೊತೆಯಾಗಿ ಶಾಲೆಗೆ ತೆರಳಿದ್ದ ಇವರಿಬ್ಬರು ಶನಿವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗಿ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಬಳಿಗೆ ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top