ಕೈಕಂಬ: ಮೂವರು ಯುವಕರಿಗೆ ಚೂರಿ ಇರಿತ ► ಕಾರಿನಲ್ಲಿ ಆಗಮಿಸಿದ ತಂಡದಿಂದ ಕೃತ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12. ರಸ್ತೆ ಬದಿಯಲ್ಲಿ ನಿಂತಿದ್ದ ಮೂವರು ಯುವಕರಿಗೆ ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಬಿ.ಸಿ.ರೋಎ್ ಸಮೀಪದ ಕೈಕಂಬದಲ್ಲಿ ನಡೆದಿದೆ.

ಇರಿತಕ್ಕೊಳಗಾದವರನ್ನು ಬಂಟ್ವಾಳ ತಾಲೂಕಿನ ಶಾಂತಿಯಂಗಡಿ ಸಮೀಪದ ತಾಳಿಪಡ್ಪು ನಿವಾಸಿಗಳಾದ ಅನ್ಸಾರ್ (23), ಸಫ್ವಾನ್ (23), ಹಾಗೂ ಫಯಾಝ್ (23) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ ಬಿ.ಸಿ. ರೋಡ್ ಕೈಕಂಬ ಬಳಿ ನಿಂತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಇವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದೆ.ಘಟನೆಯಲ್ಲಿ ಗಾಯಗೊಂಡ ಮೂವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ದಿನಸಿ, ಡ್ರೆಸ್ ಮತ್ತು ಫ್ಯಾನ್ಸಿ ಅಂಗಡಿಯಿಂದ ಕಳ್ಳತನ

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!
Scroll to Top