(ನ್ಯೂಸ್ ಕಡಬ) newskadaba.com ಕಡಬ, ಡಿ.07. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕಡಬ ಅಂಗಡಿಮನೆ ನಿವಾಸಿ, ಚಾಲಕ ಹರೀಶ್‍ರವರ ಕುಟುಂಬಕ್ಕೆ ಕಡಬ ಮಧುರ ಟೂರಿಸ್ಟ್ ವಾಹನ ಚಾಲಕ – ಮಾಲಕರ ವತಿಯಿಂದ 25 ಸಾವಿರ ರೂ. ಧನ ಸಹಾಯ ನೀಡಲಾಯಿತು.

ಕಡಬ ಮಧುರ ಟೂರಿಸ್ಟ್ ವಾಹನ ಚಾಲಕ – ಮಾಲಕರ ಸಂಘದ ಅಧ್ಯಕ್ಷ ಲೋಕೇಶ್‍ರವರು 25 ಸಾವಿರ ರೂಪಾಯಿಯನ್ನು ಮೃತ ಹರೀಶ್‍ರವರ ಪತ್ನಿ ಶಂಕರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ನಿತ್ಯಾನಂದ ಪಡಿಯಾರ್, ಮುನೀರ್ ತಿಮರಡ್ಡ, ಕೃಷ್ಣಪ್ಪ ಕುತ್ಯಾಡಿ, ಗಣೇಶ್ ಪಿಲತ್ತೋಡಿ, ಸುಲೈಮಾನ್ ಮರ್ದಾಳ, ಮುನ್ನ, ಶಾಹಿದ್ ಕಲ್ಲಂತ್ತಡ್ಕ, ದೇವು, ರಾಮಣ್ಣ, ಅಲ್ತಾಫ್, ಹಮೀದ್, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.
