ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ ► ಮಂಗಳೂರು ಮೂಲದ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ದಮಾಮ್, ಡಿ.06. ಉಮ್ರಾ ಯಾತ್ರೆಗೆ ತೆರಳಿ ಹಿಂತಿರುಗುತ್ತಿದ್ದಾಗ ಉಂಟಾದ ವಾಹನ ಅಪಘಾತದಲ್ಲಿ ಮಂಗಳೂರು ಮೂಲದ ಇಬ್ಬರು ಮೃತಪಟ್ಟ ಘಟನೆ ಸೌದಿ ಅರೇಬಿಯಾದ ದಮಾಮ್ ನಲ್ಲಿ ಗುರುವಾರದಂದು ಸಂಭವಿಸಿದೆ.

ಮೃತರನ್ನು ಎಮಿರೇಟ್ಸ್ ಖಾದರ್ ಎಂದೇ ಚಿರಪರಿಚಿತರಾಗಿದ್ದ ಉಡುಪಿ ಸಮೀಪದ ಪರ್ಕಳ ನಿವಾಸಿ ಕೆ. ಅಬ್ದುಲ್ ಖಾದರ್(58) ಹಾಗೂ ಪತ್ನಿಯ ತಂದೆ ಎಂ.ಕೆ. ಅಬ್ದುಲ್ ಖಾದರ್ ಬಾವಾ(79) ಎಂದು ಗುರುತಿಸಲಾಗಿದೆ. ಉಮ್ರಾ ನಿರ್ವಹಿಸಿ ಕುಟುಂಬ ಸಮೇತ ಕಾರಿನಲ್ಲಿ ಜುಬೈಲ್ ಗೆ ಮರಳುತ್ತಿದ್ದಾಗ ಉಂಟಾದ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಎಮಿರೇಟ್ಸ್ ಖಾದರ್ ಅವರ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ದಮಾಮ್ ನ ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ➤➤ ಪತ್ನಿಯನ್ನು ರಕ್ಷಿಸಿದ್ದ ಪತಿ ಮೃತ್ಯು

error: Content is protected !!
Scroll to Top