ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲಿ ನಡೆಯಿತು ಪೈಶಾಚಿಕ ಕೃತ್ಯ ► ಏಳು ಮಂದಿಯ ತಂಡದಿಂದ ಹಾಡುಹಗಲೇ ಯುವತಿಯ ಗ್ಯಾಂಗ್ ರೇಪ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.27. ನಗರದ ಹೊರವಲಯದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆಂದು ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಹಾಡುಹಗಲೇ ಸಾಮೂಹಿಕ ಅತ್ಯಾಚಾರಗೈದ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಕಾರ್ಖಾನೆಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವತಿಯೋರ್ವಳು ನವೆಂಬರ್ 18 ರಂದು ಮಧ್ಯಾಹ್ನದ ವೇಳೆಗೆ ವಿಹಾರಕ್ಕೆಂದು ತನ್ನ ಸ್ನೇಹಿತನೊಂದಿಗೆ ತೋಟ ಬೆಂಗರೆಯ ಅಳಿವೆ ಬಾಗಿಲು ಬೀಚ್‌ಗೆ ತೆರಳಿದ್ದಳೆನ್ನಲಾಗಿದ್ದು, ಈ ವೇಳೆ ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅವರಿಬ್ಬರನ್ನು ಬೆದರಿಸಿದ್ದಲ್ಲದೆ ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ತನ್ನ ಮೇಲೆ ಏಳು ಮಂದಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ನಗರ ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Also Read  ಶಾಲಾ ವಾಹನ ಢಿಕ್ಕಿ ➤ ಪಾದಾಚಾರಿ ಸ್ಥಳದಲ್ಲೇ ಮೃತ್ಯು…!!!!

error: Content is protected !!
Scroll to Top