ಕದ್ರಿ ಪಾರ್ಕ್‌ಗೆ ಸುತ್ತಾಡಲೆಂದು ಬಂದಿದ್ದ ಪ್ರೇಮಿಗಳಿಂದ ವಿಷ ಸೇವಿಸಿ ಆತ್ಮಹತ್ಯೆ ಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.26. ಸುತ್ತಾಡಲೆಂದು ಪಾರ್ಕ್‌ಗೆ ಬಂದಿದ್ದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಪ್ರೇಮಿಗಳನ್ನು ಕಾಸರಗೋಡು ನಿವಾಸಿ ಹರ್ಷಿತ್ ಕುಮಾರ್ ಮತ್ತು ಆತನ ಪ್ರಿಯತಮೆ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ವೇಳೆ ಕದ್ರಿ ಪಾರ್ಕಿಗೆ ಬಂದಿದ್ದ ಪ್ರೇಮಿಗಳು ಕೆಲಕಾಲ ಪಾರ್ಕ್‌ನಲ್ಲಿ ಸುತ್ತಾಡಿದ್ದು, ಆ ಬಳಿಕ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಕದ್ರಿ ಠಾಣಾ ಪೊಲೀಸರು ಪರಿಶೀಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

Scroll to Top