ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಿತ ಪ್ರಜ್ಞಾ ಸ್ವಾಧಾರ ಗೃಹ ಮಹಾಲಕ್ಷ್ಮಿ ಕಾಂಪ್ಲೆಕ್ಸ್, ಜಪ್ಪಿನಮೊಗರು, ಮಂಗಳೂರು ಇಲ್ಲಿ ತೆರವಾಗಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮಾಸಿಕ ನಿಗದಿತ ಗೌರವಧನ ರೂ. 12,000/-ರ ಆಧಾರದಲ್ಲಿ ಅಧೀಕ್ಷಕರ ಹುದ್ದೆಗೆ, ರೂ. 10,000/-ರ ಆಧಾರದಲ್ಲಿ ಸಮಾಲೋಚಕರ ಹುದ್ದೆಗೆ ಎಂ.ಎಸ್.ಡಬ್ಲ್ಯೂ (ಮೆಡಿಕಲ್ ಸೈಕ್ಯಾಟ್ರಿಕ್), ರೂ. 8,000/- ರ ಆಧಾರದಲ್ಲಿ ಲೆಕ್ಕಿಗರು ಹುದ್ದೆಗೆ ವಾಣಿಜ್ಯ ವಿಭಾಗದಲ್ಲಿ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಪಡೆದಿರುವಂತಹ ಹಾಗೂ ರೂ. 5,000/- ರ ಆಧಾರದಲ್ಲಿ ಚೌಕಿದಾರ್ ಹುದ್ದೆಗೆ ಎಂಟನೇ ತರಗತಿ ವಿದ್ಯಾರ್ಹತೆ ಹೊಂದಿರುವ 18 ರಿಂದ 38 ವರ್ಷ ವಯೋಮಿತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ಅರ್ಜಿ ಫಾರಂಗಾಗಿ ನಿರ್ದೇಶಕರು, ಪ್ರಜ್ಞಾ ಸಲಹಾ ಕೇಂದ್ರ, ಫಳ್ನೀರ್ ರೋಡ್, ಕಂಕನಾಡಿ, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಶ್ರೀ ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ, ವ್ಯಾಪಾರ ಅಭಿವೃದ್ಧಿ ಅಂದುಕೊಂಡ ಕಾರ್ಯ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top