ವಿವಾದದಿಂದಾಗಿ 2 ಬಾರಿ ರದ್ದಾದ ಕಡಬದ ಹಸಿಮೀನು ಮಾರುಕಟ್ಟೆ ಹರಾಜು ► ಮೊತ್ತ ಇಳಿಕೆಯೊಂದಿಗೆ ಅ.16 ರಂದು ಮತ್ತೆ ಹರಾಜು

(ನ್ಯೂಸ್ ಕಡಬ) newskadaba.com ಕಡಬ,‌ ಅ.13. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟದಿಂದಾಗಿ 2 ಬಾರಿ ಹರಾಜು ಪ್ರಕ್ರಿಯೆ ರದ್ದಾದ ಹಿನ್ನೆಲೆಯಲ್ಲಿ ವಿಶೇಷ ಸಭೆ ನಡೆಸಿದ ಪಂಚಾಯತ್ ಆಡಳಿತವು ಅ.16 ರಂದು ಮತ್ತೆ ಹರಾಜು ನಡೆಸಲು ತೀರ್ಮಾನಿಸಿದೆ.

ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ 1 ವರ್ಷದ ಅವಧಿಗಾಗಿ ನೀಡಲಾಗಿದ್ದ ಹರಾಜು ಹಕ್ಕು ಸೆ. 6 ಕ್ಕೆ ಕೊನೆಯಾಗಿತ್ತು. ಮತ್ತೆ ಮೀನು ಮಾರಾಟದ ಹಕ್ಕನ್ನು ನೀಡುವುದಕ್ಕಾಗಿ ಪಂಚಾಯತ್ ವತಿಯಿಂದ ನಿಗದಿಯಾಗಿದ್ದ ಹರಾಜು ಪ್ರಕ್ರಿಯೆ ಬಿಡ್ಡುದಾರರು ಇಲ್ಲದೇ ಇದ್ದುರಿಂದ 2 ಬಾರಿ ರದ್ದುಗೊಂಡಿತ್ತು. ಹರಾಜಿನ ಆರಂಭಿಕ ಮೊತ್ತವನ್ನು ಇಳಿಸಬೇಕೆಂದು ಆಗ್ರಹಿಸಿ ಮೀರು ಮಾರಾಟಗಾರರು ಹರಾಜಿನಲ್ಲಿ ಭಾಗವಹಿಸಿರಲಿಲ್ಲ. ಅದರಿಂದಾಗಿ ಅ. 07 ರಿಂದ ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ಸ್ಥಗಿತಗೊಂಡಿತ್ತು. ಇದೀಗ ಹರಾಜಿನ ಆರಂಭಿಕ ಮೊತ್ತವನ್ನು 4 ಲಕ್ಷ ರೂ. ಗಳಿಗೆ ಇಳಿಸಲಾಗಿದೆ. ಕಳೆದ ಬಾರಿ ಕಡಬದ ಸಂತೆ ಮಾರು ಕಟ್ಟೆಯ ಬಳಿಯ ಹಸಿಮೀನು ಮಾರಾಟದ ಜಾಗದ ಹಕ್ಕು 8.10 ಲಕ್ಷ ರೂ. ಗೆ ಖಾಯಂ ಆಗಿದ್ದರೆ, ಕಡಬದ ರೈತ ಸಂಪರ್ಕ ಕೇಂದ್ರದ ಬಳಿಯ ಜಾಗ  6.21 ಲಕ್ಷ ರೂ. ಗೆ ಹಾಗೂ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳದ ಮಾರುಕಟ್ಟೆ 1.14 ಲಕ್ಷ ರೂ. ಗೆ ಹರಾಜಾಗಿತ್ತು. ಈ ಬಾರಿ ಪಂಜ ರಸ್ತೆಯ ಮಾಲೇಶ್ವರ ಕ್ರಾಸ್ ಬಳಿ ಹೊಸದಾಗಿ ಮೀನು ಮಾರಾಟದ ಜಾಗ ಗುರುತಿಸಲಾಗಿದ್ದು, ಸಂತೆ ಮಾರುಕಟ್ಟೆಯ ಬಳಿ, ರೈತ ಸಂಪರ್ಕ ಕೇಂದ್ರದ ಬಳಿ ಹಾಗೂ ಮಾಲೇಶ್ವರ ಕ್ರಾಸ್ ಬಳಿ 4 ಲಕ್ಷ ರೂ. ಗಳಂತೆ ಹರಾಜಿನ ಆರಂಭಿಕ ಮೊತ್ತವನ್ನು ನಿಗದಿಪಡಿಸಲಾಗಿದೆ. ಕೋಡಿಂಬಾಳದಲ್ಲಿ  ಹರಾಜಿನ ಆರಂಭಿಕ ಮೊತ್ತವನ್ನು 50 ಸಾವಿರ ರೂ. ನಿಗದಿಪಡಿಸಲಾಗಿದೆ.

Also Read  ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ ➤ ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ

ಪಂಚಾಯತ್ ಅಧ್ಯಕ್ಷತೆ ಬಾಬು ಮುಗೇರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜ್ಯೋತಿ ಡಿ.ಕೋಲ್ಪೆ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್ ಹಾಗೂ ಪಂಚಾಯತ್ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

error: Content is protected !!
Scroll to Top