ಬಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ವಿದೇಶೀ ಭಕ್ತರು ► ನವರಾತ್ರಿ ಉತ್ಸವದಲ್ಲಿ ಭಾಗಿ

(ನ್ಯೂಸ್ ಕಡಬ) newskadaba.com ಕಡಬ, ಅ.13. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಕಡಬ ಸಮೀಪದ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನಕ್ಕೆ ಗುರುವಾರ ವಿದೇಶಿ ಪ್ರಜೆಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.

ಇಂಗ್ಲೆಂಡಿನ ಇಸ್ಕಾನ್ ದೇವಾಲಯದ ಕಾರ್ಯಕರ್ತ ವುಕೋಸಾವ್ ಜೋಕನೋವಿಸ್ ಯಾನೆ ವಾಯು ದಾಸ್ ಹಾಗೂ ಕಝಾಕಿಸ್ತಾನದ ಮಹಿಳೆ ಗುಲ್ಜಾನ್ ಬಲ್ಯ ದೇವಾಲಯದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ, ಸರತಿ ಸಾಲಿನಲ್ಲಿ ನಿಂತು ಭಕ್ತಿ ಶ್ರದ್ದೆಯಿಂದ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿರು. ಸ್ಥಳೀಯ ಶ್ರೀಪೂರ್ಣ ಆಯುರ್ವೆದ ಚಿಕಿತ್ಸಾಲಯಕ್ಕೆ ಪಂಚಕರ್ಮ ಚಿಕಿತ್ಸೆಗೆ ವಿದೇಶದಿಂದ ಆಗಮಿಸಿರುವ ಇವರು ಆರ್ಯುವೇದ ಚಿಕಿತ್ಸಾಲಯದ ವೈದ್ಯ ಡಾ|ಸುರೇಶ್ ಕುಮಾರ್ ಕೂಡೂರು ಹಾಗೂ ದೇವಕಿ ಸುರೇಶ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿನ ಪೂಜಾ ವಿಧಿ ವಿಧಾನ ಹಾಗೂ ದೇವಸ್ಥಾನದ ಬಗ್ಗೆ ಮಾಹಿತಿ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಇತರ ಸಮಿತಿಯ ಮುಖಂಡರು ವಿದೇಶಿ ಭಕ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Also Read  ಪ್ರಧಾನಿ ಮೋದಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದ ಡೊಮಿನಿಕಾ

error: Content is protected !!
Scroll to Top