ಮರ್ಧಾಳ: ರಿಕ್ಷಾದಲ್ಲಿಟ್ಟು ಅಕ್ರಮ ಮದ್ಯ ಸರಬರಾಜು ► 23 ಪ್ಯಾಕೆಟ್ ಮದ್ಯಗಳೊಂದಿಗೆ ಆರೋಪಿಯ ಬಂಧನ



(ನ್ಯೂಸ್ ಕಡಬ) newskadaba.com ಕಡಬ, ಅ.02. ರಿಕ್ಷಾವೊಂದರಲ್ಲಿ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ಘಟನೆಯನ್ನು ಪತ್ತೆ ಹಚ್ಚಿರುವ ಕಡಬ ಪೊಲೀಸರು 23 ಮದ್ಯದ ಪ್ಯಾಕೆಟ್ ನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.








ಬಂಧಿತ ಆರೋಪಿಯನ್ನು ಮರ್ಧಾಳದಲ್ಲಿ ರಿಕ್ಷಾ ಚಾಲಕನಾಗಿರುವ ನವಾಝ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮದ್ಯದಂಗಡಿ ಮುಚ್ಚಿದ್ದು, ಆರೋಪಿಯು ಬೊಳ್ಳೂರು ಕ್ರಾಸ್ ಬಳಿ ರಿಕ್ಷಾದಲ್ಲಿ ಮದ್ಯವನ್ನು ಸರಬರಾಜು ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಪೊಲೀಸರು ಮದ್ಯದ ಪ್ಯಾಕೆಟ್ ಗಳೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top