ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ – News Kadaba

ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ರಾಮಕುಂಜ ಗ್ರಾಮದ ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಈ ಕ್ಷೇತ್ರ ಸಂತಾನ ಪ್ರಾಪ್ತಿಗೆ ವಿಶೇಷತೆ ಪಡೆದಿದ್ದು, ನೂರಾರು ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಸಂಕಲ್ಪ ಮಾಡಿಕೊಂಡರು. ದೇವಳದ ಎದುರಿನ ಕೆರೆಯಲ್ಲಿ ಮಿಂದು ಅದೇ ಬಟ್ಟೆಯಲ್ಲಿ ದೇವರ ಎದುರು ಅರ್ಚಕರ ಮುಖಾಂತರ ಸಂಕಲ್ಪ ಮಾಡಿಕೊಳ್ಳುವುದು ಇಲ್ಲಿನ ವಾಡಿಕೆ. ಈ ಸಂದರ್ಭದಲ್ಲಿ ಅರ್ಚಕರು ನೀಡುವ ಮುಷ್ಟಿ ಅಕ್ಕಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ೧೦ ದಿವಸ ಈ ಅಕ್ಕಿಯನ್ನು ನಿತ್ಯ ಅನ್ನದೊಂದಿಗೆ ಬೇಯಿಸಿ ತಿನ್ನಬೇಕು ಎಂಬುದು ನಿಯಮ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಹಲವು ದಂಪತಿಗಳು ಹರಕೆ ಸಲ್ಲಿಸಿದರು.

Scroll to Top