ಮಂಗಳೂರು ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಮೂರನೇ ವಾರ್ಷಿಕೋತ್ಸವ ► ರಾಷ್ಟ್ರೀಯ ಪದಕ ವಿಜೇತ ಸ್ಪರ್ಧಾಳುಗಳಿಗೆ ಚಿನ್ನದ ನಾಣ್ಯ ನೀಡಿ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.22. ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಮಂಗಳೂರು ಇದರ ಮೂರನೇ ವಾರ್ಷಿಕೋತ್ಸವವು ಇತ್ತೀಚೆಗೆ ಮಣ್ಣಗುಡ್ಡದ ರೋಟರಿ ಬಾಲಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗಳಿಸಿದ 7 ಮಂದಿ ಸ್ಕೇಟರ್ ಗಳಾದ ಡ್ಯಾಶೀಲ್ ಅಮಂಡಾ ಕಾನ್ಸೆಸ್ಸೋ, ಮೋಕ್ಷಾ ಸುವರ್ಣ, ದೀಯಾ ದಾಸ್, ಶಾಮಿಲ್ ಅರ್ಷದ್, ಖುಷಿ ರಾಣಿ, ಅರ್ಪಿತಾ ಶೇಟ್, ತನ್ಮಯ್ ಕೊಟ್ಟಾರಿ ಇವರಿಗೆ ತಲಾ 4 ಗ್ರಾಂ ಚಿನ್ನದ ನಾಣ್ಯವನ್ನು‌ನೀಡಿ ಅಭಿನಂದಿಸಲಾಯಿತು. ಜೊತೆಗೆ ರಾಷ್ಟ್ರೀಯ ಮಟ್ಟಕ್ಕೆ ತಲುಪಿದ 9 ಮಂದಿ ಸ್ಕೇಟರ್ ಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ‌ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಕಾರ್ಪೊರೇಟರ್ ಸುಧೀರ್ ಶೆಟ್ಟಿ, ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್, ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷ ಜಯರಾಜ್, ತರಬೇತುದಾರರಾದ ಮೋಹನ್ ದಾಸ್,ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಮಾಲಕ ಫ್ರಾನ್ಸಿಸ್ ಕಾನ್ಸೆಸ್ಸೋ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು. ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ನಸಿಯಾ ಶಾ ವರದಿ‌ ಮಂಡಿಸಿದರು.ಸರ್ವತ್ ತೋನ್ಸೆ ವಂದಿಸಿದರು.

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಈ ಒಂದು ನಿಯಮ ಪಾಲಿಸಿ

error: Content is protected !!
Scroll to Top