ಕಡಬ ವಲಯ ಮಟ್ಟದ ಕ್ರೀಡಾ ಕೂಟ ► ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲದಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯು 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಯನ್ನು ಮತ್ತು ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿದೆ.

ಸಂಸ್ಥೆಯ 31 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಮಹಮ್ಮದ್ ನಿಯಾಝ್ ಮತ್ತು ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸನುಷಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಸಂಸ್ಥೆಯ ಸಂಚಾಲಕರಾದ ಫಾ|ರೊನಾಲ್ಡ್ ಲೋಬೊ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Also Read  ಟ್ವೆಂಟಿ- 20 ವಿಶ್ವಕಪ್ ಗಾಗಿ ಟೀಂ 'ಬಿಲಿಯನ್ ಚಿಯರ್ಸ್ ಜೆರ್ಸಿ' ನೂತನ ಸಮವಸ್ತ್ರ ಅನಾವರಣ

error: Content is protected !!
Scroll to Top