ಬಂಟ್ವಾಳ: ನಾಲ್ಕನೇ ತರಗತಿಯ ಬಾಲಕಿಯ ಅತ್ಯಾಚಾರ ಯತ್ನ ► ತಡವಾಗಿ ಬೆಳಕಿಗೆ ಬಂತು ಪೈಶಾಚಿಕ ಕೃತ್ಯ ► ವೃದ್ಧ ಸೇರಿದಂತೆ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.20. ನಾಲ್ಕನೇ ತರಗತಿಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸರಣಿ ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗೂಡಿನಬಳಿ ಕೆಲದಿನಗಳ ಹಿಂದೆ ನಡೆದಿದ್ದು, ಬುಧವಾರದಂದು ಬೆಳಕಿಗೆ ಬಂದಿದೆ.

ಕಳೆದ ಕೆಲದಿನಗಳಿಂದ ಬಾಲಕಿ ಮಂಕಾಗಿದ್ದು, ವಿಚಾರಿಸಿದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಬಯಲಿಗೆ ಬಂದಿದೆ. ಪ್ರಕರಣದ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಪ್ರಕರಣದ ಆರೋಪಿಗಳಾದ ಗೂಡಿನಬಳಿಯ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ(65), ಬೇಕರಿ ಐಟಂ ಲೈನ್‌ಸೇಲ್ ವೃತ್ತಿಯ ಅಂಬಾರಿ ಯಾನೆ ರಝಾಕ್(35) ಹಾಗೂ ಹೊಟೇಲ್ ಕಾರ್ಮಿಕ ನವಾಝ್(22) ಎಂಬವರನ್ನು ಬಂಧಿಸಿದ್ದಾರೆ. ಪೈಶಾಚಿಕ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಸಾರ್ವಜನಿಕರು ಆರೋಪಿಗಳ ಕಾರು ಹಾಗೂ ಮನೆಗೆ ಕಲ್ಲೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಬಂಟ್ವಾಳ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಸಾರ್ವಜನಿಕರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

Also Read  ವಯನಾಡು ಭೂಕುಸಿತ ; ಅನೇಕ ಮಂದಿ ಮೃತ್ಯು...!     ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು -ಕೇರಳ ಸಿಎಂ ಪಿಣರಾಯಿ    

error: Content is protected !!
Scroll to Top