(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.19. ಆದರ್ಶ ಮಸೀದಿಯಾಗಿ ಆಯ್ಕೆಗೊಂಡ ಬೆಳ್ಳಾರೆ ಝಕರಿಯ ಜುಮಾ ಮಸೀದಿಯಲ್ಲಿ ಮಾಹಿತಿ ಕೇಂದ್ರವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮುಸ್ತಫಾ ಕಲ್ಲಪನೆ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿಯು ಇತ್ತೀಚೆಗೆ ಮಂಗಳೂರಿನ ವಕ್ಫ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಬೆಳ್ಳಾರೆ ಝಕರಿಯ ಜುಮಾ ಮಸೀದಿಯನ್ನು ಆದರ್ಶ ಮಸೀದಿ ಎಂದು ಘೋಷಣೆ ಮಾಡಿ, ಮಾಹಿತಿ ಕೇಂದ್ರ ತೆರೆಯಲು 80,000ರೂ ಚೆಕ್ ಅನ್ನು ಮಂಜೂರು ಮಾಡಲಾಗಿತ್ತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಝಕರಿಯ ಜುಮಾ ಮಸೀದಿಯ ಅದ್ಯಕ್ಷರಾದ ಕೆ ಎಂ ಮಹಮ್ಮದ್ ಹಾಜಿ ವಹಿಸಿದ್ದರು. ಝಕರಿಯ ಜುಮಾ ಮಸೀದಿ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಝಕರಿಯ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ , ಕಾರ್ಯದರ್ಶಿ ಬಶೀರ್ ಕಲ್ಲಪಣೆ , ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ ,ಹಿದಾಯ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶಾಫಿ ಬೆಳ್ಳಾರೆ ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಆರಿಫ್ ಬೆಳ್ಳಾರೆ ,ಆಡಳಿತ ಮಂಡಳಿ ಸದಸ್ಯರುಗಳಾದ ಅಬ್ದುಲ್ ಖದರ್ ಹಾಜಿ ,ಬಶೀರ್ ಬಿ ಎ ,ಆಶಿರ್ ಎ ಬಿ ಬೆಳ್ಳಾರೆ ,ಅಝರುದ್ದೀನ್ ಬೆಳ್ಳಾರೆ, ಜಮಾಲುದ್ದೀನ್ ಕೆ ಎಸ್., ಕೆ.ಎ.ಬಶೀರ್ , ಜಲೀಲ್ ಎ.ಆರ್. ಸೇರಿದಂತೆ ಜಮಾತರು ಸೇರಿದಂತೆ ಮಸೀದಿಗೆ ಒಳಪಡುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು .