ಧರ್ಮಸ್ಥಳ ದಿಂದ ಕಡಬಕ್ಕೆ ಇಚಿಲಂಪಾಡಿ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ಧರ್ಮಸ್ಥಳ ಡಿಪೋದಿಂದ ನೆಲ್ಯಾಡಿ-ಇಚ್ಲಂಪಾಡಿ ಮಾರ್ಗವಾಗಿ ಕಡಬಕ್ಕೆ ಪ್ರಯಾಣ ಆರಂಭಿಸಿದ ಕೆಎಸ್ಸಾರ್ಟಿಸಿ ಬಸ್ಸನ್ನು ಇಚ್ಲಂಪಾಡಿಯಲ್ಲಿ ಸ್ವಾಗತಿಸಲಾಯಿತು.

ಧರ್ಮಸ್ಥಳ – ಕಡಬಕ್ಕೆ ಬೆಳಿಗ್ಗೆ ಹಾಗೂ ಸಾಯಂಕಾಲ ಆರಂಭಗೊಂಡ ನೂತನ ಬಸ್ ಸಂಚಾರವನ್ನು ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗಿಸ್ ಸ್ವಾಗತಿಸಿ, ಶುಭಹಾರೈಸಿದರು. ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ಉಷಾ ಅಂಚಾನ್, ಗ್ರಾ.ಪಂ.ಸದಸ್ಯರಾದ ಮಾದವ, ಅಬ್ರಾಹಂ, ಡಿಸಿಸಿ ಸದಸ್ಯರಾದ ಜೋರ್ಜ್ ಕುಟ್ಟಿ, ಸೂಸಮ್ಮ, ಗ್ರಾ.ಪಂ.ಮಾಜಿ ಸದಸ್ಯರಾದ ಮಂಜು, ಯಮುನ, ಅಬ್ರಾಹಂ ವರ್ಗಿಸ್, ಗುತ್ತಿಗೆದಾರ ಪಾಪಚ್ಚನ್, ಡೇವಿಡ್ ಎಂ.ಪಿ., ಕೊರಗಪ್ಪ, ಶಿಬು, ಶ್ರೀನಿವಾಸ, ಸ್ಥಳೀಯರಾದ ಪುರಂದರ, ಬಾಬಿ, ಗೋಪಾಲ, ನಾಗೇಶ್, ನವೀನ್, ಜಿನ್ಸಿ, ಗ್ರೇಸಿ, ಜೋಸ್, ಬಾಲಕೃಷ್ಣ, ಕುರಿಯನ್, ಶಿವಪ್ಪ, ರಿತೇಶ್, ಎ.ಜೆ.ಚಾಕೋ, ರಿಬು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Scroll to Top