ದುರಸ್ತಿಗೊಂಡ ಬಿಸಿಲೆ ಘಾಟ್ ರಸ್ತೆ – ವಾಹನ ಸಂಚಾರಕ್ಕೆ ಮುಕ್ತ ► ಸುಬ್ರಹ್ಮಣ್ಯದಿಂದ ಬಿಸಿಲೆ‌ ಮೂಲಕ ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.15. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಸಂಪರ್ಕ ಕಡಿತಗೊಂಡಿದ್ದ ಸುಬ್ರಹ್ಮಣ್ಯ – ಬಿಸಿಲೆ ರಸ್ತೆಯು ಶುಕ್ರವಾರದಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸಂಚಾರ ಆರಂಭಗೊಂಡಿದೆ.

ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿ ಜನಸಂಪರ್ಕ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಒಂದೆಡೆ ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಗಳು ಕೂಡಾ ಗುಡ್ಡ ಕುಸಿದಿದ್ದರಿಂದ ಚಾರ್ಮಾಡಿ ಘಾಟ್ ರಸ್ತೆ ಮಾತ್ರ ಸಂಚಾರಕ್ಕೆ ಅನಿವಾರ್ಯವಾಗಿತ್ತು. ಈ‌ ನಡುವೆ ಬಿಸಿಲೆ ರಸ್ತೆಯ ದುರಸ್ತಿ ವೇಗವಾಗಿ ನಡೆದಿದ್ದರಿಂದ ಬಹುತೇಕ ಪೂರ್ಣಗೊಂಡಿದ್ದು, ಈ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಅಲ್ಲದೆ ಈ ರಸ್ತೆಯ ಮೂಲಕ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಕರ್ನಾಟಕ ಸಾರಿಗೆ ಬಸ್ಸಿನ ವ್ಯವಸ್ಥೆಯನ್ನು ಕೆಎಸ್ಸಾರ್ಟಿಸಿ ಯು ಮಾಡಿದೆ.

Also Read  ಉನ್ನತ ವ್ಯಾಸಂಗಕ್ಕೆಂದು ಭಾರತಕ್ಕೆ ಬಂದ ➤ ಮಾದಕ ವಸ್ತು ಮಾರಾಟ ಮಾಡಿ ಸಿಕ್ಕಿಬಿದ್ದ.⁉️

error: Content is protected !!
Scroll to Top