(ನ್ಯೂಸ್ ಕಡಬ) newskadaba.com ಕಡಬ, ಸೆ.15. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಕಡಬ ವಲಯ ಮಟ್ಟದ ಕ್ರೀಡಾಕೂಟ ಸೆ.18 ಮತ್ತು 19ರಂದು ನಡೆಯಲಿದೆ ಎಂದು ನೂಜಿಬಾಳ್ತಿಲ ಸಿಆರ್ಪಿ ಗೋವಿಂದ ನಾಯ್ಕ ತಿಳಿಸಿದ್ದಾರೆ.
ದ.ಕ.ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ನೂಜಿಬಾಳ್ತಿಲ ಬೆಥನಿ ಸಂ.ಪ.ಪೂ.ಕಾಲೇಜು ಹಾಗೂ ನೂಜಿಬಾಳ್ತಿಲ ಕ್ಲಸ್ಟರ್‍ನ ಸಹಭಾಗಿತ್ವದಲ್ಲಿ ಕಡಬ ವಲಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಸೆ.18ರಂದು ಕಾರ್ಯಕ್ರಮವು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ, ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ದ್ವಜಾರೋಹಣ ನೆರವೇರಿಸಲಿದ್ದು, ಜಿ.ಪಂ.ಸದಸ್ಯ ಪಿ.ಪಿ.ವರ್ಗಿಸ್ ವಂದನೆ ಸ್ವೀಕರಿಸಲಿದ್ದಾರೆ. ತಾ.ಪಂ.ಸದಸ್ಯ ಗಣೇಶ್ ಕೈಕುರೆ ಕ್ರೀಡಾಜ್ಯೋತಿ ಬೆಳಗಿಸಲಿದ್ದು, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶಕ ರೆ.ಫಾ.ಸಕರಿಯಾಸ್ ನಂದಿಯಾಟ್ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಕನ್ಯ ಡಿ.ಎಸ್., ಸ್ಥಳೀಯ ಗ್ರಾ.ಪಂ.ಸದಸ್ಯೆ ಅಮ್ಮಣಿ ಜೋಸೆಪ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಬೆಥನಿ ವಿದ್ಯಾಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾದರ್ ಸಾಹೇಬ್, ಯುವ ಉದ್ಯಮಿ ಹಾಸನದ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ತಾಲೂಕು ಯುವಜನ ಸಬಲೀಕರಣ ಮತ್ತು ಕ್ರಿಡಾಧಿಕಾರಿ ಮಾಮಚ್ಚನ್, ತಾಲೂಕು ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಅಬ್ರಾಹಂ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಐ.ವಿ.ಗ್ರೇಟ್ಟಾ, ಬೆಥನಿ ವಿದ್ಯಾಸಂಸ್ಥೆಯ ಹಿ.ವಿ.ಸಂಘದ ಅಧ್ಯಕ್ಷ ಡಾ| ಅನಿಲ್ ಈಶೋ ಉಪಸ್ಥಿತರಿರಲಿದ್ದಾರೆ.
ಸೆ.19ರಂದು ನೂಜಿಬಾಳ್ತಿಲ ವಿದ್ಯಾಸಂಸ್ಥೆಯ ನಿರ್ದೇಶಕ ರೆ.ಫಾ.ಸಕರಿಯಾಸ್ ನಂದಿಯಾಟ್ ಒಐಸಿ. ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಉದ್ಯಮಿ ಎ.ಸಿ.ಕುರಿಯನ್ ವಿವಿಧ ಕ್ರೀಡಾ ಸ್ಪರ್ಧಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಿದ್ದಾರೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಬಾಲಕೃಷ್ಣ ಗೌಡ ಬಳ್ಳೇರಿ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಗೀವರ್ಗೀಸ್ ಬರ್ಸೋಮಾ(ಒಐಸಿ), ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ ಎ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಗೌಡ, ಯುವ ಉದ್ಯಮಿ ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ಪಿ.ಕೆ., ಯುವ ಉದ್ಯಮಿ ತೀರ್ಥೇಶ್ ಮರ್ಧಾಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಾಲೂಕು ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳು ಕ್ರೀಡಾ ಪಟುಗಳು, ಶಿಕ್ಷಕರು, ಶಿಕ್ಷಕೇತರ ವೃಂದದವರು, ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು, ಕ್ರೀಡಾಭಿಮಾನಿಗಳು ಭಾಗವಹಿಸುವ ಈ ಕ್ರೀಡಾಕೂಟದ ಯಶಸ್ಸಿಗೆ ಎಲ್ಲ ಊರ ಪರವೂರ ಕ್ರೀಡಾಭಿಮಾನಿಗಳು ಸಹಕರಿಸುವುದಲ್ಲದೆ, ಎರಡು ದಿನಗಳಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಬೇಕೆಂದು ನೂಜಿಬಾಳ್ತಿಲ ಕ್ಲಸ್ಟರ್ ಮುಖ್ಯಸ್ಥ ಗೋವಿಂದ ನಾಯ್ಕ, ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್., ಹಾಗೂ ಪ್ರೌಢಶಾಲಾ ಮುಖ್ಯಗುರುಗಳಾದ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.