ನೂಜಿಬಾಳ್ತಿಲ ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ನೂಜಿಬಾಳ್ತಿಲ ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ರೆ|ಫಾ|ವರ್ಗೀಸ್‍ರವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಹಿರಿಯ ಧರ್ಮಗುರು ರೆ|ಫಾ| ಸಕರಿಯಾಸ್ ನಂದಿಯಾಟ್, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾದರ್ ಸಾಹೇಬ್ ಕಡಬ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೆರಿಯನ್ ಇ.ಸಿ., ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಭಿಲಾಷ್ ಪಿ.ಕೆ, ಸಂಸ್ಥೆಯ ಗುಮಾಸ್ತ ಯೋಹನ್ನಾನ್ ಮಾತನಾಡಿ ಶಿಕ್ಷಕರ ದಿನಾಚರಣೆಗೆ ಶುಭಹಾರೈಸಿದಲ್ಲದೆ ಉಪನ್ಯಾಸಕ ಜೋಸೆಫ್‍ರವರ ಮಾತನಾಡಿದರು.

ಸನ್ಮಾನ: ಕಳೆದ 35 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಈ ತಿಂಗಳಾಂತ್ಯದಲ್ಲಿ ನಿವೃತ್ತಿಗೊಳ್ಳಲಿರುವ ಉಪನ್ಯಾಸಕ ಜೋಸೆಫ್ ಟಿ.ಜೆ ಹಾಗೂ ಶಿಕ್ಷಕಿ ಲಿಲ್ಲಿ ಎಲಿಜಬೆತ್ ದಂಪತಿಯನ್ನು , ನಿವೃತ್ತ ಪ್ರಾಂಶುಪಾಲ ಚೆರಿಯನ್ ಇ.ಸಿ. ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಪ್ರಾಚಾರ್ಯರಾದ ಜಾರ್ಜ್ ಟಿ.ಎಸ್ ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಗುರು ಸುಬ್ರಹ್ಮಣ್ಯ ಭಟ್ ವಂದಿಸಿದರು. ಪ್ರೌಢಶಾಲಾ ಶಿಕ್ಷಕ ತೋಮಸ್ ಎ.ಕೆ ಕಾರ್ಯಕ್ರಮ ನಿರೂಪಿಸಿದರು.

Also Read  ತುಳುನಾಡಿನ ಚರಿತ್ರೆಗೆ ದೊರೆತ ಮಹತ್ವದ ಮನ್ನಣೆ ➤ ಪಠ್ಯಪುಸ್ತಕವಾಗಲಿದೆ ತುಳುನಾಡಿನ ಚರಿತ್ರೆ

error: Content is protected !!
Scroll to Top