ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ► ಪ್ರಳಯ‌ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.06. ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ವತಿಯಿಂದ ಪ್ರಳಯ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಸಂಗ್ರಹಿಸಿದ ನೋಟ್ ಪುಸ್ತಕ ಮತ್ತು ಪಠ್ಯೋಪಕರಣಗಳ ಹಸ್ತಾಂತರ ಸಮಾರಂಭವು ಇತ್ತೀಚೆಗೆ ಗಾಂಧಿನಗರ ಸುನ್ನಿ ಸೆಂಟರ್’ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷರಾದ ಅಬ್ದುಲ್ಲ ಝುಹ್ರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರಾದ ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ವಿಷಯ ಮಂಡಿಸಿ ಭಾಷಣಗೈದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಉಪಾಧ್ಯಕ್ಷರಾದ ಫೈಝಲ್ ಝುಹ್ರಿ ಕಲ್ಲುಗುಂಡಿ ದುಆ ನೆರವೇರಿಸಿದರು. ಸೆಕ್ಟರ್ ಸಮಿತಿ ಸಂಗ್ರಹಿಸಿದ ನೋಟ್ ಪುಸ್ತಕ ಮತ್ತು ಪಠ್ಯೋಪಕರಣಗಳನ್ನು ಸೆಕ್ಟರ್ ನಾಯಕರು ಡಿವಿಷನ್ ನಾಯಕರಿಗೆ ಹಸ್ತಾಂತರಿಸಿದರು. ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸುಳ್ಯ ಕೇಂದ್ರ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಹಾಜಿ ಐ. ಇಸ್ಮಾಯೀಲ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ ಪ್ರ. ಕಾರ್ಯದರ್ಶಿ ಹಸೈನಾರ್ ಜಯನಗರ, ಹನೀಫ್ ಬಿ.ಎಂ ಜನತಾ, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಉಪಾಧ್ಯಕ್ಷರಾದ ಹಸೈನಾರ್ ಗುತ್ತಿಗಾರು, ಕಾರ್ಯದರ್ಶಿ ಅಬ್ಬಾಸ್ ಎ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸೆಕ್ಟರ್ ಪ್ರ. ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ ಮಾಲಿಕ್ ಕೊಯಂಗಿ ವಂದಿಸಿದರು.

Also Read  ಕಾಸರಗೋಡು: ಪತ್ರಕರ್ತ ಸೇರಿದಂತೆ ಇಬ್ಬರಿಗೆ ಕೊರೋನ ಪಾಸಿಟಿವ್

error: Content is protected !!
Scroll to Top