ದುಬೈ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ ಪ್ರಿನ್ಸಿಪಾಲ್ ಹಳೆನೇರಂಕಿ ನಫೀಸತುಲ್ ಮಿಸ್ರಿಯಾ ದಅವಾ ಕಾಲೇಜಿಗೆ ಭೇಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.03. ಇಲ್ಲಿನ ಆತೂರು ಸಮೀಪದ ಹಳೇ ನೇರಂಕಿಯ ವಾದಿ ಹಿಕ್ಮದಲ್ಲಿ ಆರಂಭಗೊಂಡ ನಫೀಸತ್ತುಲ್ ಮಿಸ್ರಿಯಾ ಮೆಮೋರಿಯಲ್ ದಅವಾ ಕಾಲೇಜಿಗೆ ದುಬೈ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ ನ ಪ್ರಾಂಶುಪಾಲರಾದ ಜನಾಬ್ ಅಬೂಬಕರ್ ತುಂಬೆಯವರು ಭೇಟಿ ನೀಡಿದರು.

ನೂರಾರು ವರ್ಷಗಳ ಇತಿಹಾಸ ಇರುವ ಪ್ರಶಾಂತ ಸುಂದರವಾದ ಗ್ರಾಮೀಣ ಪ್ರದೇಶದ ಹಳೇ ನೇರಂಕಿ ಮುಹಿಯದ್ದೀನ್ ಮಸೀದಿ ಪರಿಸರದಲ್ಲಿ ಪುಣ್ಯ ಮಹಿಳೆ ಬೀವಿ ನಫೀಸತುಲ್ ಮಿಸ್ರಿಯ(ರ) ನಾಮಧೇಯದಲ್ಲಿ ಹಲವಾರು ಯೋಜನೆಯನ್ನು ಗುರಿಯಲ್ಲಿಟ್ಟುಕೊಂಡು ಆರಂಭಿಸಲಾದ ಸಂಸ್ಥೆಗೆ ಸರ್ವ ವಿಧದ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅಬೂಬಕರ್ ತುಂಬೆ, ಉಲಮಾ ಉಮರಾ ಗಳ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗೆ ಸಹಕಾರ ನೀಡಿದರೆ ಅದುಮಾತ್ರ ನಾಳೆ ಪರಲೋಕದಲ್ಲಿ ಉಪಕಾರಕ್ಕೆ ಬರುತ್ತದೆ ಎಂದರು. ಸಂಸ್ಥೆಯ ಮ್ಯಾನೇಜರ್ ಮಾಹಿನ್ ದಾರಿಮಿ ಮಾತನಾಡಿ, ಮುಲ್ಕಿ ಮಸೀದಿಯ ಯಸ್.ಬಿ. ದಾರಿಮಿ ಉಪ್ಪಿನಂಗಡಿ, ಉಪಾಧ್ಯಕ್ಷ ಮೌಲಾನಾ ಯು.ಕೆ. ದಾರಿಮಿ ಚೊಕ್ಕಬೆಟ್ಟು, ಮುಖ್ಯ ಅಧ್ಯಾಪಕ ಝೈನುದ್ದೀನ್ ಯಮಾನಿ ಸಂದರ್ಭೋಚಿತವಾಗಿ ಮಾತನಾಡಿದರು. ಜಮಾತ್ ಅಧ್ಯಕ್ಷ ಅಬ್ಬಾಸ್ ಭೂಮಿಕ ,ಉಪಾಧ್ಯಕ್ಷ ಸುಲೈಮಾನ್ ಬೈಲಂಗಡಿ,ಅಬ್ದುಲ್ ರಜಾಕ್ ದಾರಿಮಿ, ಶರೀಪ್ ,ಹಮೀದ್ ನೇರಂಕಿ ಮೊದಲಾದವರು ಉಪಸ್ಥಿತರಿದ್ದರು.

Also Read  ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ ಕೊರೊನಾ ಸೋಂಕಿಗೆ ಬಲಿ

error: Content is protected !!
Scroll to Top