(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.31. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ತಿಂಗಳುಗಳೇ ಕಳೆದರೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಕೊನೆಗೂ ಅಂಕಿತ ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯು.ಟಿ.ಖಾದರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಯಮಾಲಾರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಉಳಿದಂತೆ ಡಾ.ಜಿ.ಪರಮೇಶ್ವರ್ – ಬೆಂಗಳೂರು ನಗರ ಮತ್ತು ತುಮಕೂರು, ಆರ್.ವಿ.ದೇಶಪಾಂಡೆ-ಉತ್ತರ ಕನ್ನಡ ಮತ್ತು ಧಾರವಾಡ, ಡಿ.ಕೆ.ಶಿವಕುಮಾರ್-ರಾಮನಗರ ಮತ್ತು ಬಳ್ಳಾರಿ, ಕೆ.ಜೆ.ಜಾರ್ಜ್-ಚಿಕ್ಕಮಗಳೂರು, ರಮೇಶ್ ಜಾರಕಿಹೊಳಿ-ಬೆಳಗಾವಿ, ಶಿವಾನಂದ ಪಾಟೀಲ್-ಬಾಗಲಕೋಟೆ, ಪ್ರಿಯಾಂಕ್ ಖರ್ಗೆ-ಕಲಬುರಗಿ, ರಾಜಶೇಖರ ಬಿ. ಪಾಟೀಲ್-ಯಾದಗಿರಿ, ವೆಂಕಟರಮಣಪ್ಪ-ಚಿತ್ರದುರ್ಗ ಎನ್.ಎಚ್.ಶಿವಶಂಕರ ರೆಡ್ಡಿ-ಚಿಕ್ಕಬಳ್ಳಾಪುರ, ಕೃಷ್ಣ ಭೈರೇಗೌಡ-ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಸಿ.ಪುಟ್ಟರಂಗಶೆಟ್ಟಿ-ಚಾಮರಾಜನಗರ, ಝಮೀರ್ ಅಹ್ಮದ್-ಹಾವೇರಿ, ಜಯಮಾಲ-ಉಡುಪಿ, ಆರ್.ಶಂಕರ್-ಕೊಪ್ಪಳ, ಎನ್.ಮಹೇಶ್-ಗದಗ, ವೆಂಕಟರಾವ್ ನಾಡಗೌಡ-ರಾಯಚೂರು, ಎಸ್.ಆರ್.ಶ್ರೀನಿವಾಸ್-ದಾವಣಗೆರೆ, ಸಿ.ಎಸ್.ಪುಟ್ಟರಾಜು-ಮಂಡ್ಯ, ಸಾ.ರಾ.ಮಹೇಶ್-ಕೊಡಗು, ಬಂಡೆಪ್ಪ ಕಾಶೆಂಪುರ್-ಬೀದರ್, ಎಚ್.ಡಿ.ರೇವಣ್ಣ-ಹಾಸನ, ಡಿ.ಸಿ.ತಮ್ಮಣ್ಣ-ಶಿವಮೊಗ್ಗ, ಎಂ.ಸಿ.ಮನಗೂಳಿ-ಬಿಜಾಪುರ, ಜಿ.ಟಿ.ದೇವೇಗೌಡರವರಿಗೆ ಮೈಸೂರು ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಲಾಗಿದೆ.