ಕೊಕ್ಕಡ: ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.24. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಅಪರಿಚಿತ ಗಂಡಸಿನ ಮೃತದೇಹವೊಂದು ಮಂಗಳವಾರದಂದು ಪತ್ತೆಯಾಗಿದೆ.

ಕೊಕ್ಕಡದಿಂದ ಶಿಬಾಜೆ ಕ್ರಾಸ್ ನ ಕಾಪಿನಬಾಗಿಲು ಜಂಕ್ಷನ್ ನಲ್ಲಿ ಕಸದ ರಾಶಿಯಲ್ಲಿ ಮೃತದೇಹವಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಾರು 35 ರಿಂದ 40 ವರ್ಷ ಪ್ರಾಯದ ಗಂಡಸಿನ‌ ಮೃತದೇಹ ಇದಾಗಿದ್ದು, ಮೃತಪಟ್ಟು ಎರಡ್ಮೂರು ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಮಂಗಳೂರು: ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಎಂಸಿಸಿ ಸಮರ- ಮಾರ್ಚ್ 15 ರಿಂದ ಕಠಿಣ ಕ್ರಮ

error: Content is protected !!
Scroll to Top