ನೇಜಿ ನಾಟಿಗಾಗಿ ಗದ್ದೆಗಿಳಿದ ಪಿಜಕ್ಕಳ ಸರಕಾರಿ ಶಾಲಾ ಮಕ್ಕಳು

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಪಿಜಕ್ಕಳ ಕಿ.ಪ್ರಾ.ಶಾಲಾ ಮಕ್ಕಳಿಗೆ ಪಿಜಕ್ಕಳ ಆನಂದ ನಾಕ್ರವರ ಗದ್ದೆಯಲ್ಲಿ ನೇಜಿ ನಾಟಿಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷತೆ ನಡೆಯಿತು.

ಕೃಷಿ, ಬೇಸಾಯದ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಶಿಸುತ್ತಿರುವ ಬೇಸಾಯ ಕೃಷಿಯ ಬಗ್ಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ಸಮಗ್ರ ಮಾಹಿತಿ ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಶಾಲಾ ಮುಖ್ಯ ಶಿಕ್ಷಕಿ ಚೇತನಾ ತಿಳಿಸಿದರು. ಸಹ ಶಿಕ್ಷಕಿ ಕವಿತಾ ಸಹಕರಿಸಿದರು.

Scroll to Top